ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಕೇಂದ್ರದ ಆವರಣದಲ್ಲಿ ಉದ್ಯಾನವನದ ಚಿತ್ತಾರ ಮೂಡಿಸಲಾಗಿದೆ

ಕಾರಾಗೃಹ ಅಂದ್ರೆ ಅಪರಾಧಿಗಳನ್ನು ಬಂಧಿಸಿಡುವ ಜಾಗವೇನೋ ಸರಿ. ಆದರೆ, ಅದೇ ಕಾರಾಗೃಹ ಆರೋಪಿಗಳ ಮನ ಪರಿವರ್ತನೆಯ ಕೇಂದ್ರವೂ ಆಗಿದೆ

ಅಂತೆಯೇ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಕೇಂದ್ರದ ಆವರಣದಲ್ಲಿ ಬೃಂದಾವನ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ

ಹೂ ಗಿಡಗಳನ್ನ ನೆಟ್ಟು, ಆಕರ್ಷಕ ಕಲಾಕೃತಿಗಳನ್ನ ರಚಿಸಿ ಮನಸ್ಸಿಗೆ ಹೊಸ ಚೈತನ್ಯ ನೀಡುವಂತಹ ವಾತಾವರಣ ನಿರ್ಮಿಸಲಾಗಿದೆ

 ಕೋಟ್ಯಂತರ ಭಕ್ತರ ಆರಾಧ್ಯದೈವ ಶ್ರೀ ರಾಮನಿಗೆ 15 ಲಕ್ಷ ಬೆಲೆಯ 15 ಕೆಜಿ ಇಟ್ಟಿಗೆ!

ವಿಶೇಷ ಅಂದರೆ ಇದೆಲ್ಲವನ್ನೂ ಜೈಲಿನಲ್ಲಿರುವ ಖೈದಿಗಳೇ ಮಾಡಿದ್ದಾಗಿದೆ

ಯಾವುದೋ ಕೆಟ್ಟ ಗಳಿಗೆಯಲ್ಲಿ ನಡೆದು ಹೋಗುವ ತಪ್ಪುಗಳಿಗೆ ಪ್ರಾಯಶ್ಚಿತ್ತ ಎನ್ನುವಂತೆ ಖೈದಿಗಳು ಕೂಡಾ ಇಂತಹ ಚಟುವಟಿಕೆಯಲ್ಲಿ ಸ್ವಇಚ್ಛೆಯಿಂದ ಪಾಲ್ಗೊಂಡ ಪರಿಣಾಮ ಇಲ್ಲಿ ವಿವಿಧ ಕಲಾಕೃತಿ, 6 ಕೈ ತೋಟಗಳು ನಿರ್ಮಾಣಗೊಂಡಿದೆ

ಶ್ರೀಕೃಷ್ಣನ ಜನ್ಮಸ್ಥಳ, ಕಾಫಿನಾಡಿನ ಝರಿ ಫಾಲ್ಸ್ ಪರಿಕಲ್ಪನೆಯೂ ಇಲ್ಲಿ ಕಲಾಕೃತಿಯ ರೂಪ ಪಡೆದಿದೆ

ಚಿಕ್ಕಮಗಳೂರು ಜಿಲ್ಲಾ ಕಾರಾಗೃಹವು ಸುಮಾರು 15 ಎಕರೆ ವಿಸ್ತೀರ್ಣ ಹೊಂದಿದೆ. ಪ್ರಸ್ತುತ ಇಲ್ಲಿ 250 ಮಂದಿ ವಿಚಾರಣಾಧೀನ ಖೈದಿಗಳು ಇದ್ದಾರೆ

ಕೊಲೆ ನಡೆದ 24 ಗಂಟೆಯಲ್ಲೇ ಆರೋಪಿ ಮನೆಗೆ ನುಗ್ಗಿದ ಪೊಲೀಸ್ ನಾಯಿ!

ಒಟ್ಟು 56 ಮಂದಿ ಸಿಬ್ಬಂದಿಗಳು ಇದ್ದಾರೆ. 20 ಅಡಿ ಎತ್ತರದ ಭದ್ರವಾದ ಕಂಪೌಂಡ್ ಸುತ್ತಲೂ ಇವೆ

ಖೈದಿಗಳಿಗಾಗಿ ಇಲ್ಲಿ ಗ್ರಂಥಾಲಯವನ್ನು ನಿರ್ಮಿಸಲಾಗಿದೆ

ಈ ಮೂಲಕ ನಿರಂತರ ಮನ ಪರಿವರ್ತನೆ ಕೆಲಸವೂ ಇಲ್ಲಿ ನಡೆಯುತ್ತಿದೆ. ಖೈದಿಗಳೇ ನಿರ್ಮಿಸಿರುವ ಪಾರ್ಕ್, ಬೊಂಬೆಗಳು ಭಾರೀ ಗಮನ ಸೆಳೆಯುತ್ತಿವೆ

ಏನೇ ಆಗಲಿ, ಮನುಷ್ಯ ತನ್ನ ದುಡುಕಿನಿಂದ ಮಾಡುವ ತಪ್ಪನ್ನು ತಿದ್ದಿಕೊಳ್ಳಲು ಈ ಜೈಲಿನ ವಾತಾವರಣದಿಂದ ಸಾಧ್ಯವಾದರೆ ಈ ಪ್ರಯತ್ನಕ್ಕೆ ನಿಜಕ್ಕೂ ಒಂದೊಳ್ಳೆ ಅರ್ಥ ಬರುವುದರಲ್ಲಿ ಸಂಶಯವಿಲ್ಲ

 ದಂಡಗಳನ್ನು ರಾತ್ರೋರಾತ್ರಿ ಇಟ್ಟು ಯಾರೆಲ್ಲಿ ಹೋದ್ರು!?