ವಿಮಾನದಲ್ಲಿ ಬಂದ ಹಾವು! ದೇವನಹಳ್ಳಿ ಏರ್ಪೋರ್ಟ್‌ನಲ್ಲಿ ಸೀಜ್‌

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಗೆಜ್‌ ಬ್ಯಾಗ್ ಒಂದು ಶಾಕ್‌ ಕೊಟ್ಟಿದೆ

ವಿದೇಶದಿಂದ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಹಾವುಗಳನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ

ಬ್ಯಾಂಕಾಕ್‌ನಿಂದ ಕೆಐಎಎಲ್‌ಗೆ  ಆಗಮಿಸಿದ ಪ್ರಯಾಣಿಕರೊಬ್ಬರ ಲಗೇಜ್ ತಪಾಸಣೆ ವೇಳೆ ಈ ಹಾವುಗಳು ಪತ್ತೆಯಾಗಿದೆ

10 ಹಳದಿ ಬಣ್ಣದ ಆನಕೊಂಡ ಹಾವುಗಳನ್ನ ಲಗೇಜ್‌ ಬ್ಯಾಗ್‌ನಲ್ಲಿ ತಂದಿದ್ದರು

ಕೂಡಲೆ ಅವರನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ

ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ