ಕೊಪ್ಪಳದ ಹೋಟೆಲ್‌ನಲ್ಲಿ ಅಚ್ಚರಿಯ ಘಟನೆ!
ಇಡ್ಲಿ ವಡಾ ನೀಡಬೇಕಾದ ಬದಲಿಗೆ ತನ್ನ ಗ್ರಾಹಕನಿಗೆ ಹೋಟೆಲ್ ಮಾಲೀಕನೋರ್ವ ಹಣದ ಬ್ಯಾಗ್ ನೀಡಿರುವ ಘಟನೆಯೊಂದು ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ರಸೂಲ್ ಸಾಬ ಸೌದಾಗರ್ ಎಂಬ ಹೋಟೆಲ್ ಮಾಲೀಕ ನಗರದ ಶ್ರೀನಿವಾಸ ದೇಸಾಯಿ ಎಂಬ ಶಿಕ್ಷಕರಿಗೆ ಇಡ್ಲಿ ವಡಾ ಕೊಡುವ ಬದಲು ಬರೋಬ್ಬರಿ 50 ಸಾವಿರ ಹಣ ಇರುವ ಬ್ಯಾಗ್ ಒಂದನ್ನು ನೀಡಿದ್ದರು.
ಶಿಕ್ಷಕ ಶ್ರೀನಿವಾಸ ಹೋಟೆಲ್ಗೆ ಇಡ್ಲಿ ವಡಾ ತರಲು ಹೋಗಿದ್ದರು. ಬೇರೆ ಯಾವುದೋ ಕೆಲಸದ ಒತ್ತಡದಲ್ಲಿದ್ದ ಹೋಟೆಲ್ ಮಾಲೀಕ ರಸೂಲ್ ಇಡ್ಲಿ ವಡಾ ಬ್ಯಾಗ್ ನೀಡುವ ಬದಲು 50 ಸಾವಿರ ರೂಪಾಯಿ ಬ್ಯಾಗ್ ನೀಡಿದ್ದರು.
ಇಡ್ಲಿ ವಡಾ ಎಂದು ಬ್ಯಾಗ್ ತೆಗೆದುಕೊಂಡು ಶಿಕ್ಷಕ ಶ್ರೀನಿವಾಸ ದೇಸಾಯಿ ಮನೆಗೆ ಹೋಗಿದ್ದಾರೆ. ಆದರೆ ಮನೆಗೆ ಹೋಗಿ ಬ್ಯಾಗ್ ತೆಗೆದು ನೋಡಿದರೆ ಇಡ್ಲಿ ವಡಾ ಬದಲು ಬರೋಬ್ಬರಿ 50 ಸಾವಿರ ಹಣವಿರೋದು ಕಂಡಿದೆ.
ಇದನ್ನು ಕಂಡು ಗಾಬರಿಯಾದ ಶಿಕ್ಷಕ ಶ್ರೀನಿವಾಸ್ ದೇಸಾಯಿ ಅವರು ತಕ್ಷಣ ಹೋಟೆಲ್‌ಗೆ ಹೋಗಿ ರಸೂಲ್ ಸಾಬ ಅವರಿಗೆ ಹಣವನ್ನು ಮರಳಿಸಿದ್ದಾರೆ.
ತಮ್ಮ ಹಣವನ್ನು ತಮ್ಮದೇ ಕೈಯಾರೆ ಕಳೆದುಕೊಂಡಿದ್ದ ಹೋಟೆಲ್ ಮಾಲೀಕ ರಸೂಲ್ ಸಾಬ ಅವರು ಶಿಕ್ಷಕ ಶ್ರೀನಿವಾಸ ದೇಸಾಯಿ ಅವರ ಪ್ರಾಮಾಣಿಕತೆಗೆ ಸಲಾಂ ಹೇಳಿದ್ದಾರೆ.
ತಮ್ಮ ಹಣವನ್ನು ತಮ್ಮದೇ ಕೈಯಾರೆ ಕಳೆದುಕೊಂಡಿದ್ದ ಹೋಟೆಲ್ ಮಾಲೀಕ ರಸೂಲ್ ಸಾಬ ಅವರು ಶಿಕ್ಷಕ ಶ್ರೀನಿವಾಸ ದೇಸಾಯಿ ಅವರ ಪ್ರಾಮಾಣಿಕತೆಗೆ ಸಲಾಂ ಹೇಳಿದ್ದಾರೆ.
ಒಟ್ಟಾರೆ ಪ್ರಾಮಾಣಿಕತೆ ಕಡಿಮೆ ಆಗುತ್ತಿರುವ ಈ ಆಧುನಿಕ ಜಗತ್ತಿನಲ್ಲಿ ಬರೋಬ್ಬರಿ 50 ಸಾವಿರ ರೂಪಾಯಿ ಹಣವನ್ನು ಮರಳಿಸಿದ ಶಿಕ್ಷಕನ ಕುರಿತು ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ