ವಾವ್.. ಇದೇನಿದು ಕ್ಯಾಂಡಲ್ ಲೈಟ್ ಡಿನ್ನರ್‌ಗೆ ತಯಾರಿ ಅಂದ್ಕೊಂಡ್ರ!
ಇದು ಅದೆಷ್ಟೋ ಶುಭ ಸಮಾರಂಭಗಳಿಗೆ ಮುದ ನೀಡೋ ಕ್ಯಾಂಡಲ್‌ಗಳ ತಯಾರಿಕಾ ಕಂಪೆನಿ
ಹಾಗಂದ ಮಾತ್ರಕ್ಕೆ ಇದೇನೋ ದೊಡ್ಡ ಕಾರ್ಖಾನೆಯಲ್ಲಿ ತಯಾರಾಗ್ತಿದೆ ಅಂದ್ಕೋಬೇಡಿ
ಬದಲಿಗೆ, ಮೈಸೂರಿನ ಮಹಿಳೆ ಮನೆಯಲ್ಲಿಯೇ ಇಂತಹ ಅಂದ ಚೆಂದದ ಹತ್ತಾರು ಬಗೆಯ ಕ್ಯಾಂಡಲ್‌ಗಳು ತಯಾರಾಗುತ್ತಿವೆ
ಹೌದು, ಇಂತಹ ಅಂದ ಚೆಂದದ, ನೋಡಲು ಆಕರ್ಷಕವಾಗಿರುವ ಈ ಕ್ಯಾಂಡಲ್‌ಗಳ ತಯಾರಕರೇ ಮೈಸೂರು ನಗರದ ನಂಜು ಮಳಿಗೆ ಸರ್ಕಲ್ ಬಳಿಯ ‘ಔರಾ ಕ್ಯಾಂಡಲ್ಸ್’ನ ಮಾಲಕಿ ಶ್ರೀವಿದ್ಯಾ ಅವರು
ಸಾಮಾನ್ಯವಾಗಿ ದೀಪಾವಳಿ, ಕ್ರಿಸ್ಮಸ್ ಹಬ್ಬಗಳಿಗೆ ಕ್ಯಾಂಡಲ್ ಗೆ ಹೆಚ್ಚಿನ ಬೇಡಿಕೆ ಇದ್ದರೆ, ಶ್ರೀವಿದ್ಯಾ ಅವರು ತಯಾರಿಸೋ ಈ ಕ್ಯಾಂಡಲ್‌ಗೆ ಪ್ರತಿದಿನವೂ ಬೇಡಿಕೆ ಇದ್ದಿದ್ದೇ
ವಿಶೇಷವೆಂದರೆ, ಇವರು ಕ್ಯಾಂಡಲ್ ತಯಾರಿ ಮಾಡುವಾಗ ವ್ಯಾಕ್ಸ್, ಹಣ್ಣು, ಹಣ್ಣಿನ ಬೀಜ ಗಳನ್ನು ಬಳಸಿ ಕ್ಯಾಂಡಲ್ ತಯಾರಿ ಮಾಡುತ್ತಾರೆ
ಅಷ್ಟೇ ಅಲ್ಲ, ತುಳಸಿ ಬೀಜಗಳು, ಕಾಫಿ ಬೀಜ, ಚೆರಿಗಳು ಕೂಡಾ ಬಳಸುತ್ತಾರೆ
ಮದುವೆ ಹೆಣ್ಣು ಹಾಗೂ ಗಂಡು ಹಾಕಿದ್ದ ಹಾರವು ಸ್ವಲ್ಪ ದಿನದ ನಂತರ ಒಣಗಿ ಹೋಗುತ್ತದೆ
ಅದನ್ನು ತರಿಸಿ ಕ್ಯಾಂಡಲ್ ತಯಾರಿ ಮಾಡುವುದು ಇವರ ಹವ್ಯಾಸ
ಕ್ಯಾಂಡಲ್ಸ್ ಕುರಿತು ವಿದ್ಯಾ ಅವರು ದಿ ಲೈಟ್ ಆಫ್ ಹೋಪ್ ಅನ್ನೋ ಕೃತಿಯನ್ನು ಬರೆದಿದ್ದಾರೆ
ಇನ್ನು ಇವರ ಕಪಲ್ಸ್ ಕ್ಯಾಂಡಲ್, ಪುನೀತ್ ರಾಜ್ ಕುಮಾರ್, ಬುದ್ಧ, ಸಾಯಿಬಾಬ, ಶ್ರೀಕೃಷ್ಣ ಹೀಗೆ ಹಲವು ಚಿತ್ರಗಳಿಗೂ ಕ್ಯಾಂಡಲ್ ಮೆರುಗು ನೀಡಿವೆ
ಅಮೆರಿಕಾ, ರಷ್ಯಾ, ದೆಹಲಿಯಲ್ಲೂ ಶ್ರೀವಿದ್ಯಾ ಅವರ ಕ್ಯಾಂಡಲ್‌ಗೆ ಭಾರೀ ಬೇಡಿಕೆ ಇದೆ
Sirsi Marikamba Jatra: ಮಾರಿಕಾಂಬಾ ಜಾತ್ರೆಯ ಪೂರ್ವದ ಪ್ರಮುಖ ಘಟ್ಟವೇ ಮಾರಿಕೋಣ ಮೆರವಣಿಗೆ!