ಗುಟ್ಟಾಗಿ ದೇವಸ್ಥಾನದಲ್ಲಿ 2ನೇ ಮದುವೆಯಾದ ಸಿದ್ಧಾರ್ಥ್
, ಅದಿತಿ ರಾವ್!
ತಮಿಳಿನ ನಟ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆ ಆಗಿದ್ದಾರೆ.
ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.
ಗುಟ್ಟಾಗಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಮಹಾ ಸಮುದ್ರಂ ಸಿನಿಮಾ ವೇಳೆ ಪರಿಚಯವಾದ ಈ ಜೋಡಿ ಡೇಟಿಂಗ್ ಮಾಡ್ತಿದ್ದಾರಂತೆ.
ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ 6 ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ.
ಸಿದ್ಧಾರ್ಥ್ ಈಗಾಗಲೇ ಮದುವೆಯಾಗಿದ್ದರು. ಸಿದ್ಧಾರ್ಥ್ ತನ್ನ ಬಾಲ್ಯದ ಗೆಳತಿ ಮೇಘನಾಳನ್ನು ವಿವಾಹವಾದರು.
2007ರಲ್ಲಿ ಆಕೆಗೆ ವಿಚ್ಛೇದನ ನೀಡಿದರು. ಇದು ಅದಿತಿ ರಾವ್ ಹೈದರಿ ಅವರಿಗೂ ಕೂಡ ಎರಡನೇ ಮದುವೆ ಆಗಿದೆ.
ಅದಿತಿ ರಾವ್ ಈ ಹಿಂದೆ ಸತ್ಯದೀಪ್ ಮಿಶ್ರಾ ಅವರನ್ನು ಮದುವೆಯಾಗಿದ್ದರು. ಅವರು 2012 ರಲ್ಲಿ ವಿಚ್ಛೇದನ ಪಡೆದ್ರು.
ಸಿದ್ಧಾರ್ಥ್ ಮತ್ತು ಅದಿತಿ ರಾವ್ ಮದುವೆಯಲ್ಲಿ ಅವರ ಕುಟುಂಬಗಳು ಮಾತ್ರ ಭಾಗವಹಿಸಿದ್ದರು.
ಜಾನ್ವಿಯ ಮುದ್ದು ತಂಗಿ! ಅಮ್ಮ ಶ್ರೀದೇವಿಯಂತೆ ನೀಳ ಸುಂದರಿ
ಇಲ್ಲಿದೆ ಓದಿ.