ಸೌತ್ ಸಿನಿಮಾ ನಟಿ ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮುದ್ದಾದ ಮಗ ಹಾಗೂ ಪತ್ನಿಯನ್ನು ಜಗತ್ ದೇಸಾಯಿ ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಿದ್ದಾರೆ.

ಅಮಲಾ ಪೌನ್ ಹಾಗೂ ಪತಿ ಜಗತ್ ದೇಸಾಯಿ ಮನೆಗೆ ಮಗ ಬಂದ ಖುಷಿಯಲ್ಲಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿಯನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಪತಿ ಜಗತ್ ದೇಸಾಯಿ ಅಮಲಾ ಮತ್ತು ಮಗುವಿಗೆ ಸರ್ಪ್ರೈಸ್ ನೀಡಿದ್ದಾರೆ.

ಜೂನ್ 11 ರಂದು ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇಲೈ ಎಂದು ಅಮಲಾ ತನ್ನ ಮಗುವಿಗೆ ಹೆಸರಿಟ್ಟಿದ್ದಾರೆ.

ಅಭಿಮಾನಿಗಳು ಕೂಡ ಅಮಲಾ ಪೌಲ್ಗೆ ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಅಮಲಾ ಪೌಲ್ ಕನ್ನಡದಲ್ಲಿ ನಟ ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದಾರೆ.

ಅಮಲಾ ಪೌಲ್ 2023ರಲ್ಲಿ ಜಗತ್ ದೇಸಾಯಿ ಅವರನ್ನು 2ನೇ ಮದುವೆ ಆಗಿದ್ದಾರೆ.