ನಟಿ ಆ್ಯಮಿ ಜಾಕ್ಸನ್ ಅವರು ಮಗ ಹುಟ್ಟಿದ 6 ವರ್ಷಗಳ ನಂತರ ಮದುವೆಯಾಗಿದ್ದಾರೆ.
ದಿ ವಿಲನ್ ನಟಿ ಆ್ಯಮಿ ಜಾಕ್ಸನ್ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆ್ಯಮಿ ಜಾಕ್ಸನ್ ಅವರು ಎಡ್ ವೆಸ್ಟ್‌ವಿಕ್ ಅವರನ್ನು ವಿವಾಹವಾದರು.
ನಟಿ ತನ್ನ ವೈಟ್ ವೆಡ್ಡಿಂಗ್ ಡ್ರೀಮಿ ಫೋಟೋಗಳನ್ನು ಇನ್ ಸ್ಟಾಗ್ರಾಮ್
ನಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯ ಫೋಟೋಗಳನ್ನು ಶೇರ್ ಮಾಡಿದ ಆ್ಯಮಿ ಜಾಕ್ಸನ್ “ಪ್ರಯಾಣ ಇದೀಗ ಪ್ರಾರಂಭವಾಗಿದೆ” ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾರೆ
ಈ ಜೋಡಿ ಸ್ಟಾರ್ ಸೆಲೆಬ್ರಿಟಿಗಳ ಡ್ರೀಮ್ ವೆಡ್ಡಿಂಗ್ ಸ್ಪಾಟ್ ಇಟಲಿಯಲ್ಲಿಯೇ ಮದುವೆಯಾಗಿದ್ದಾರೆ.
ಮದುವೆಯಾಗಿ ಅಲ್ಲಿಗೆ ಹೋಗುವ ಮೊದಲು, ಆ್ಯಮಿ ಎಡ್ ಅವರೊಂದಿಗೆ ವಿಮಾನದಲ್ಲಿದ್ದ ಫೋಟೋಗಳನ್ನು ಹಂಚಿಕೊಂಡರು.
ಮದುವೆಗೆ ಮುಂಚಿತವಾಗಿ, ದಂಪತಿಗಳು ಐಷಾರಾಮಿ ವಿಹಾರ ನೌಕೆಯಲ್ಲಿ ವಿವಾಹಪೂರ್ವ ಪಾರ್ಟಿಯನ್ನು ಆಯೋಜಿಸಿದ್ದರು.
ಆ್ಯಮಿ ಅವರ ಮಗ ಆಂಡ್ರಿಯಾಸ್ ಅವರು ಮಾಜಿ ಗೆಳೆಯ ಜಾರ್ಜ್ ಪನಾಯೊಟೌ ಅವರ ಪುತ್ರ.
ಆಮಿ ಜಾಕ್ಸನ್ ರಜನಿಕಾಂತ್ ಅವರ ರೋಬೋಟ್ ಸಿನಿಮಾ 2.0 ನಲ್ಲಿ ಕಾಣಿಸಿಕೊಂಡಿದ್ದಾರೆ.
ಆ್ಯಮಿ ಜಾಕ್ಸನ್ ಅವರು ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾದಲ್ಲಿ ನಟಿಸಿದ್ದರು.