ತಾಯಿಯಾಗ್ತಿರುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ!
ಗುಡ್ ನ್ಯೂಸ್ ಕೊಟ್ಟ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ
ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ-ಭುವನ್!
ಭುವನ್ ಪೊನ್ನಣ್ಣ ಜೊತೆಗೆ ಮದುವೆ ಆದ 1 ವರ್ಷದೊಳಗೇ ಸಿಹಿ ಸುದ್ದಿಕೊಟ್ಟಿದ್ದಾರೆ.
ಹರ್ಷಿಕಾ ಮತ್ತು ಭುವನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಒಂದು ಸಂತೋಷದ ವಿಷಯವನ್ನ ಸ್ಪೆಷಲ್ ಫೋಟೋ ಶೂಟ್ ಮೂಲಕ ತಿಳಿಸಿದ್ದಾರೆ.
ಕೊಡವ ಸಂಪ್ರದಾಯದ ಉಡುಗೆ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಮನೆಯ ಇತರ ಸದಸ್ಯರು ಕೂಡ ಈ ಒಂದು ಸ್ಪೆಷಲ್ ಫೋಟೋ ಶೂಟ್‌ನಲ್ಲಿ ಭಾಗಿ ಆಗಿದ್ದಾರೆ.
ಕೊಡವ ಸಂಪ್ರದಾಯದಂತೆ ಗರ್ಭಿಣಿ ಹರ್ಷಿಕಾ ವಿಶೇಷ ಕಾರ್ಯಕ್ರಮ ಕೂಡ ನಡೆದಿದೆ.
ಹರ್ಷಿಕಾ ಮತ್ತು ಭುವನ್ ಕಳೆದ ವರ್ಷ ಆಗಸ್ಟ್ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಗರ್ಭಿಣಿ ಹರ್ಷಿಕಾ ಪೂಣಚ್ಚ ಸದ್ಯ ಐದು ತಿಂಗಳ ಗರ್ಭಿಣಿ ಆಗಿದ್ದಾರೆ.