ಮದುವೆಗೂ ಮೊದಲೇ ತಾಯಿಯಾದ ಮೃಣಾಲ್ ಠಾಕೂರ್!

ಪುಟ್ಟ ಮಗುವನ್ನು ತನ್ನದೆಂದು ಬಣ್ಣಿಸಿ ಇದು ನನ್ನ ಮೊದಲ ಮಗು ಎಂದು ಹೇಳಿದ್ದಾರೆ.

ಮದುವೆಗೂ ಮುನ್ನವೇ ತಾಯಂದಿರಾಗಿ ಅದನ್ನು ಖುಷಿಯಿಂದ ಒಪ್ಪಿಕೊಂಡ ನಟಿಯರು ಇದ್ದಾರೆ.

32 ವರ್ಷದ ನಟಿ ಮೃಣಾಲ್ ಠಾಕೂರ್ ಕೂಡ ಇನ್ನೂ ಮದುವೆಯಾಗಿಲ್ಲ. ಆದರೆ ತನಗೊಬ್ಬ ಮಗಳಿದ್ದಾಳೆ ಎಂದಿದ್ದಾರೆ.

ಇದು ವಿಚಿತ್ರ ಎನಿಸಿದರೂ ಅವರು 8 ವರ್ಷದ ಬಾಲಕಿಯ ತಾಯಿಯಾಗಿರುವುದು ನಿಜ.

ಮುಂದೆ ತನಗೆ ಹುಟ್ಟುವ ಮಗು ತನ್ನ ಎರಡನೇ ಮಗು ಎಂದು ಒಪ್ಪಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮೃಣಾಲ್ ಠಾಕೂರ್ ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

ಮೃಣಾಲ್ ಠಾಕೂರ್ ತನ್ನ ಮೊದಲ ಮಗು ಎಂದು ಕರೆದಿರುವ ಬಾಲಕಿಯ ವಯಸ್ಸು 8 ವರ್ಷ.

ಮೃಣಾಲ್ ಈ ಹುಡುಗಿಯನ್ನು ದತ್ತು ಪಡೆದಿಲ್ಲ ಅಥವಾ ಮೃಣಾಲ್ ಹೆಣ್ಣು ಮಗುವಿಗೆ ಜನ್ಮ ನೀಡಿಲ್ಲ.

ಈ ಹುಡುಗಿ ಬಾಲ ನಟಿ, ಈಕೆಯ ಹೆಸರು ಕಿಯಾರಾ ಖನ್ನಾ. ಮೃಣಾಲ್ ‘ಹಾಯ್ ನಾನ್ನ’ ಚಿತ್ರದಲ್ಲಿ ಕೆಲಸ ಮಾಡಿದ್ದರು.