ವಿಚ್ಛೇದನದ ಬಳಿಕ ಬೀದಿಗೆ ಬಿದ್ದ ನಟಿ! ಈಗ ಕೋಟಿ ಕೋಟಿ ಒಡತಿಯಾಗಿದ್ದು ಹೇಗೆ?
ನಟಿ ರಶ್ಮಿ ದೇಸಾಯಿ ಭೋಜ್ಪುರಿಯಲ್ಲಿ ಸ್ಟಾರ್ ಡಮ್ ಗಿಟ್ಟಿಸಿಕೊಂಡಿದ್ದಾರೆ.
ಈಕೆ ಬಾಲಿವುಡ್ ನ ಹಲವು ನಟರಿಗೆ ಪೈಪೋಟಿ ಕೊಡುವಂತೆ ಕೋಟಿ ಕೋಟಿ ಗಳಿಸಿದ್ದಾರೆ.
38 ವರ್ಷ ವಯಸ್ಸಿನ ರಶ್ಮಿ ವಿಚ್ಛೇದನದ ನಂತ್ರ ನಾನಾ ಕಷ್ಟಗಳನ್ನು ಎದುರಿಸಿದ್ದಾರಂತೆ.
ರಶ್ಮಿ ದೇಸಾಯಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ.
ನಟಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.
ವಿಚ್ಛೇದನದ ನಂತರ ರಶ್ಮಿ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
3.25 ಕೋಟಿ ರೂ. ಮನೆ ಖರೀದಿಸಲು 2.5 ಕೋಟಿ ಸಾಲ ಮಾಡಿದ್ದರು.
ವಿಚ್ಛೇದನದ ಬಳಿಕ ಮನೆಯಿಂದ ಹೊರಗೆ ಬಂದೆ ಹಲವಾರು ದಿನ ನನ್ನ ಕಾರಿನಲ್ಲಿ ವಾಸಿಸಬೇಕಾಯಿತು.
ಈ ಸಮಸ್ಯೆಗಳ ನಂತರ ಖಿನ್ನತೆಯಿಂದ ಆತ್ಯಹತ್ಯೆಗೂ ಯತ್ನಿಸಿದ್ದೆ ಎಂದು ರಶ್ಮಿ ಹೇಳಿದ್ದಾರೆ.
ಎಲ್ಲವನ್ನೂ ನನ್ನಿಂದ ಕಿತ್ತುಕೊಂಡ್ರು. ಊಟಕ್ಕೂ ಹಣವಿಲ್ಲದ ಕಾಲ ಬಂದಿತು ಎಂದು ನಟಿ ಹೇಳಿದ್ರು.