ನಟ ಹೃತಿಕ್ ರೋಷನ್ ವಿಚ್ಛೇದನದ ನಂತರ, ನಟಿ ಸಬಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ರು.
ಆದರೆ ಕೆಲವೇ ತಿಂಗಳಿಂದ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನಲಾಗ್ತಿದೆ.
ಈ ರೂಮರ್ಸ್ ನಿಜನಾ ಸಬಾಗೆ ಬ್ರೇಕಪ್ ಶಾಕ್ ಕೊಟ್ರಾ ಹೃತಿಕ್ ರೋಷನ್?
ನಟ ಹೃತಿಕ್ ತಮ್ಮ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದಲ್ಲೂ ಸದಾ ಸುದ್ದಿಯಲ್ಲಿ ಇರುತ್ತಾರೆ.
ವಿಚ್ಛೇದನದ ನಂತರ, ಹೃತಿಕ್ ಹೆಸರು ಯುವ ನಟಿ ಸಬಾ ಆಜಾದ್ ಜೊತೆ ಸೇರಿಕೊಂಡಿತು.
ಹೃತಿಕ್ ಮತ್ತು ಸಬಾ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುತ್ತಿದ್ದರು.
ಹೃತಿಕ್ ತನಗಿಂತ 12 ವರ್ಷ ಚಿಕ್ಕವಳಾದ ಸಬಾ ಜೊತೆ ತುಂಬಾ ಖುಷಿ ಖುಷಿಯಾಗಿಯೇ ಕಾಣಿಸಿಕೊಳ್ತಿದ್ರು.
ಆದ್ರೆ ಇವರಿಬ್ಬರ ಸಂಬಂಧದಲ್ಲಿ ಅಂತರ ಹೆಚ್ಚಿದ್ದು, ಇಬ್ಬರು ದೂರವಾಗಿದ್ದಾರೆ ಎನ್ನಲಾಗ್ತಿದೆ.
ಹೃತಿಕ್ ಮತ್ತು ಸಬಾ ಬ್ರೇಕಪ್ ಬಳಿಕ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ.
ಇಬ್ಬರೂ ತಮ್ಮ ಸಂಬಂಧಕ್ಕೆ ಬ್ರೇಕ್ ನೀಡಿ ಹೊಸ ಜೀವನ ಆರಂಭಿಸಿದ್ದಾರೆ.
ಹೃತಿಕ್ ಮತ್ತು ಸಬಾ ಕಳೆದ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.