ನೆದರ್ಲೆಂಡ್ಸ್ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 411ರನ್ ಗಳ ಬೃಹತ್ ಗುರಿ ನೀಡಿದೆ

ಈ ಪಂದ್ಯದಲ್ಲಿ ಐವರು ಭಾರತೀಯರು 50 + ಸ್ಕೋರ್ ಮಾಡಿ ವಿಶ್ವದಾಖಲೆ ಸೃಷ್ಟಿಸಿದೆ

ಆದರೆ ಈ ಐವರು ಬ್ಯಾಟರ್​ಗಳಿಗಿಂತಲೂ ಹೆಚ್ಚು ಮನರಂಜನೆ ನೀಡಿದ್ದು, ವಿರಾಟ್​ ಕೊಹ್ಲಿ. 9 ವರ್ಷಗಳ ನಂತರ ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್​ ಪಡೆದಿದ್ದಾರೆ

ಅದರಲ್ಲೂ ತಮ್ಮ ನೆಚ್ಚಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಕೆಟ್​ ಪಡೆದಿದ್ದು ಮತ್ತೊಂದು ವಿಶೇಷವಾಗಿದೆ

World Cup 2023: ವಿರಾಟ್‌ಗೆ ಬೌಲಿಂಗ್ ಮಾಡು ಅಂತ ರೋಹಿತ್‌ ಹೇಳೋದಕ್ಕೆ ಇದೇ ಕಾರಣ! ವಿಡಿಯೋ ವೈರಲ್

ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಬೌಲಿಂಗ್​ನಲ್ಲೂ ಕಮಾಲ್ ಮಾಡಿದರು 

ಸಿರಾಜ್​ಗೆ ಚೆಂಡು ಬಡಿದು ಮೈದಾನದಿಂದ ಹೊರ ಹೋದ ಹಿನ್ನಲೆ ವಿರಾಟ್​ ಕೊಹ್ಲಿ 3 ಓವರ್​ ಬೌಲಿಂಗ್ ಮಾಡಿದ, ಒಂದು ವಿಕೆಟ್​ ಪಡೆದರು

ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್​ ಎಡ್ವರ್ಡ್ಸ್ ವಿಕೆಟ್ ಪಡೆದರು

ಕೊಹ್ಲಿ ವಿಕೆಟ್ ಪಡೆಯುತ್ತಿದ್ದಂತೆ ತಂಡದ ಆಟಗಾರರು, ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಹಾಗೂ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿ ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು

ಅನುಷ್ಕಾ ಶರ್ಮಾ ಹಲವು ಪಂದ್ಯಗಳಲ್ಲಿ ಹಾಜರಾಗಿದ್ದರೂ ಇಷ್ಟೊಂದು ಖುಷಿಯಾಗಿ, ಎಂಜಾಯ್ ಮಾಡಿರಲಿಲ್ಲ

ಆದರೆ ವಿಕೆಟ್​ ಪಡೆಯುತ್ತಿದ್ದಂತೆ ಚೆಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸಿದರು. ಈ ವಿಡಿಯೋ, ಫೋಟೋಗಳು ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ

ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಬೌಲಿಂಗ್ ನೀಡಬೇಕೆಂದು ಅಭಿಮಾನಿಗಳು ಕೂಗುತ್ತಿದ್ದರು

ಕೊನೆಗೂ ಈ ಪಂದ್ಯದಲ್ಲಿ ರೋಹಿತ್ ಚೆಂಡನ್ನು ಕೊಹ್ಲಿಗೆ ನೀಡಿದ್ದರು. ಕೊಹ್ಲಿ ಕೂಡ ಬಹಳ ಬೇಗನೇ ವಿಕೆಟ್ ಪಡೆದು ಸಿಕ್ಕ ಅವಕಾಶ ಬಳಸಿಕೊಂಡರು

Rishi Sunak: ಬ್ರಿಟನ್‌ ಪ್ರಧಾನಿ ಕೈಯಲ್ಲಿ ವಿರಾಟ್ ಕೊಹ್ಲಿ ಸೈನ್‌ ಮಾಡಿರೋ ಬ್ಯಾಟ್! ಫೋಟೋಸ್‌ ವೈರಲ್‌