ರಾಜ್ಯದಲ್ಲಿ ಪ್ರಥಮ ಬಾರಿಗೆ ಕೇಸರಿ ಬೆಳೆದ ದಾವಣಗೆರೆ ಯುವಕ!

ದಾವಣಗೆರೆ ಯುವಕ ಕಾಶ್ಮೀರದಲ್ಲಿ ಬೆಳೆಯೋ ಕೇಸರಿ ಬೆಳೆದು ಅಚ್ಚರಿ ಮೂಡಿಸಿದ್ದಾರೆ.

ಕಾಶ್ಮೀರದ ಬೆಳೆಯನ್ನು ದಾವಣಗೆರೆಯಲ್ಲೂ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಈ ಮೂಲಕ ರಾಜ್ಯದಲ್ಲೇ ಪ್ರಥಮ ಬಾರಿಗೆ ಕೇಸರಿ ಬೆಳೆದವರು ಇವರಾಗಿದ್ದಾರೆ.

ಭಾರತದಲ್ಲಿ ಕೇಸರಿ ಅತಿ ಹೆಚ್ಚಾಗಿ ಉತ್ಪಾದನೆ ಮಾಡುವ ಏಕೈಕ ರಾಜ್ಯ ಜಮ್ಮು ಮತ್ತು ಕಾಶ್ಮೀರ.

ಆದ್ರೆ ರಾಜ್ಯದಲ್ಲಿ ಕೇಸರಿ ಬೆಳೆದು ತೋರಿಸಬೇಕೆಂಬ ಹಠದಿಂದ ಕೇಸರಿ ಬೆಳೆದಿದ್ದಾರೆ ಜಾಕೋಬ್.

ಬಾಡಿಗೆ ಮನೆಯಲ್ಲೇ ಇರುವ ಯುವಕ ಜಾಕೋಬ್, ಒಂದು ರೂಮ್ ಕೇಸರಿ ಬೆಳೆಯಲು ಮೀಸಲಿಟ್ಟಿದ್ದಾರೆ.

ರೂಮ್‍ಗೆ ಥರ್ಮಾಕೋಲ್ ,AC, ಟೆಂಪರೇಚರ್ ಮಾಪನ ಅಳವಡಿಕೆ ಮಾಡಿದ್ದಾರೆ.

ಬಿಸಿಗಾಳಿ ರೂಮ್ ಒಳಗಡೆ ಹೋಗದಂತೆ ರಕ್ಷಣೆ ಮಾಡ್ತಾ ಇದ್ದಾರೆ.

ಒಂದು ಕೆಜಿ ಕೇಸರಿಗೆ 600 ರೂಪಾಯಿ ಹಣ ನೀಡಿ, ಜಮ್ಮು ಕಾಶ್ಮೀರದ ಪ್ಯಾಮ್ಪುರ್‍ದಿಂದ60 ಕೆಜಿ ಕೇಸರಿ ಬೀಜ ತಂದಿದ್ದರು.