ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಪುತ್ರಿ!
ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಐಶ್ವರ್ಯಾ ಅರ್ಜುನ್ ಉಮಾಪತಿ ರಾಮಯ್ಯ ಅವರನ್ನು ಮದುವೆಯಾಗಿದ್ದಾರೆ.
ಜೂನ್ 10ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಐಶ್ವರ್ಯಾ ಕೆಂಪು ಬಣ್ಣದ ಸೀರೆ ಉಟ್ಟಿದ್ದರೆ, ಉಮಾಪತಿ ರಾಮಯ್ಯ ಪಂಚೆ ಶರ್ಟ್ ಶಲ್ಯ ಧರಿಸಿದ್ದರು.
ಉಂಗುರು ಹುಡುಕುವ ಶಾಸ್ತ್ರದ ಫೋಟೋವನ್ನು ಕೂಡಾ ನಟಿ ಶೇರ್ ಮಾಡಿದ್ದಾರೆ.
ಜೂನ್ 10 ರಂದು ಚೆನ್ನೈನ ಹನುಮಾನ್ ದೇವಸ್ಥಾನದಲ್ಲಿ ವಿವಾಹ ನಡೆದಿದೆ.
ಮದುವೆಗೆ ಸಂಬಂಧಿಸಿದ ಹಲ್ದಿ ಮತ್ತು ಮೆಹಂದಿ ಸಮಾರಂಭಗಳು ಅದ್ಧೂರಿಯಾಗಿ ನಡೆದಿದ್ದವು.
ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ ಮದುವೆ ಖುಷಿಯಲ್ಲಿದ್ದಾರೆ.
ಐಶ್ವರ್ಯಾ ಮತ್ತು ಉಮಾಪತಿ ಇಬ್ಬರು ಪ್ರೀತಿಸಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.