ಸುಮಾರು 500 ವರ್ಷಗಳಿಗೂ ಅಧಿಕ ಇತಿಹಾಸವಿರುವ ಉಡುಪಿ ಪರ್ಯಾಯ ಮಹೋತ್ಸವ ಪ್ರತಿ ಎರಡು ವರ್ಷಕೊಮ್ಮೆ ಜನವರಿ 18 ರಂದು ನಡೆಯುತ್ತದೆ
ಈ ಬಾರಿ 252 ನೇ ಪರ್ಯಾಯ ಮಹೋತ್ಸವ ನಡೆಯುತ್ತಿದೆ
ಕೃಷ್ಣ ನಗರಿ ಉಡುಪಿಯಲ್ಲಿ ಪರ್ಯಾಯ ಮಹೋತ್ಸವದ ಸಂಭ್ರಮ ಕಳೆಗಟ್ಟುತ್ತಿದೆ
ಹಾಗಿದ್ರೆ ಪರ್ಯಾಯ ಅಂದ್ರೇನು? ಏನಿದರ ಇತಿಹಾಸ? ಈ ಎಲ್ಲದರ ವಿವರ ಇಲ್ಲಿದೆ ನೋಡಿ
ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ
ಉಡುಪಿ ಕೃಷ್ಣಮಠದಲ್ಲಿ ಕಾಣಿಯೂರು ಮಠ, ಸೋದೆ ಮಠ, ಪುತ್ತಿಗೆ ಮಠ, ಅದಮಾರು ಮಠ, ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ ಮಠ, ಶಿರೂರು ಮಠಗಳೆಂಬ ಎಂಟು ಮಠಗಳಿವೆ
ಕೃಷ್ಣ ಮಠದ ದ್ವೈವಾರ್ಷಿಕ ಉತ್ಸವವಾಗಿರುವ ಪರ್ಯಾಯ ಮಹೋತ್ಸವ 2 ವರ್ಷಕೊಮ್ಮೆ ಅಷ್ಟಮಠಗಳ ಪೈಕಿ ಕೃಷ್ಣ ಮಠದ ಪೂಜಾ ಕೈಂಕರ್ಯದ ಹಾಗೂ ಮಠದ ಅಧಿಕಾರ ಹಸ್ತಾಂತರವಾಗುತ್ತದೆ
ಒಂದು ಸುತ್ತು ಅಂದರೆ 12 ವರ್ಷಗಳ ಬಳಿಕ ಪೂಜಾ ಕೈಂಕರ್ಯದ ಅವಕಾಶ ಪ್ರತೀ ಮಠಕ್ಕೂ ದೊರೆಯುತ್ತದೆ
ಹೀಗೆ ಕೃಷ್ಣ ಮಠದ ಪೂಜೆಯ ಅಧಿಕಾರ ಹಸ್ತಾಂತರದ ಸುಸಂದರ್ಭವೇ ಪರ್ಯಾಯ ಮಹೋತ್ಸವವಾಗಿದೆ
ವಿಯೆಟ್ನಾಂನಲ್ಲಿ ಜೋಡಿಯಾಗಿ ಸುತ್ತಾಡಿದ್ರಾ ರಶ್ಮಿಕಾ-ವಿಜಯ್?
ಕಳೆದ ಬಾರಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಗಳು ಪರ್ಯಾಯ ಪೀಠಾರೋಹಣ ಮಾಡಿದ್ದರು
ಈ ಬಾರಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣ ನಡೆಯಲಿದೆ
ಪುತ್ತಿಗೆ ಪರ್ಯಾಯಕ್ಕೆಂದು ಉಡುಪಿ ನಗರದ ಬೀದಿಗಳು ಸ್ವಚ್ಛಗೊಂಡು ಶೃಂಗಾರಗೊಂಡಿವೆ. ಪ್ರತಿದಿನ 15 ರಿಂದ 20 ಸಾವಿರ ಭಕ್ತರ ಆಗಮನವಾಗುತ್ತಿದೆ
ಉಡುಪಿಯ ವಿವಿಧ ಭಾಗಗಳಲ್ಲಿ ವೇದಿಕೆ ಸಜ್ಜುಗೊಂಡಿದ್ದು, ರಥ ಬೀದಿ, ಪಾರ್ಕಿಂಗ್, ಪಿಪಿಸಿ ಕಾಲೇಜ್, ಜೋಡುಕಟ್ಟೆ ಸೇರಿದಂತೆ ವಿಧದ ಕಡೆ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ
ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದರೆ ಈ ಟಿಫ್ಸ್ ಫಾಲೋ ಮಾಡಿ