ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಭಾರೀ ವೈರಲ್​ ಆಗುತ್ತಿದೆ

ಅದು ಯಾವ ವಿಡಿಯೋ ಎಂದರೆ ಶಾರುಖ್​ ಖಾನ್​ರವರನ್ನು ಅಭಿಮಾನಿಗಳು ಮುತ್ತಿಗೆ ಹಾಕಿ ಕಿಸ್​ ಕೊಡುವ ವಿಡಿಯೋ

 ಅನುಮತಿಯೂ ಕೇಳದೇ ಅವರನ್ನು ತಬ್ಬಿಕೊಂಡಿದ್ದಾರೆ

ಅದೂ ಸಾಲದೆಂಬಂತೆ, ಕಿಸ್​ ಕೂಡ ಮಾಡಿದ್ದಾರೆ  

ಅಭಿಮಾನಿಗಳ ಈ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದಾರೆ

ನಟ ಶಾರುಖ್ ಖಾನ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದುಎಂಬುದು ಎಲ್ಲರಿಗೂ ತಿಳಿದಿದೆ

ಎಲ್ಲೇ ಹೋದರೂ ಕೂಡ ಅವರನ್ನು ನೋಡಲು ಫ್ಯಾನ್ಸ್​ಗಳು ಕಾಯುತ್ತಿರುತ್ತಾರೆ

ಇತ್ತೀಚಿಗಂತೂ ‘ಪಠಾಣ್ ’,‘ಜವಾನ್​ ’ಸಿನಿಮಾಗಳ ಗೆಲುವಿನ ಬಳಿಕ ಅವರ ಫ್ಯಾನ್ಸ್​ ಇನ್ನಷ್ಟು ಹೆಚ್ಚಾಗಿದ್ದಾರೆ 

ಸೋಶಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ಬಗ್ಗೆಯೇ ಭಾರೀ ಚರ್ಚೆಯು ನಡೆಯುತ್ತಿದೆ

ಈ ಸಂದರ್ಭದಲ್ಲಿ ಶಾರುಖ್​ ಖಾನ್ ಅವರ ಒಂದು ಹಳೇ ವಿಡಿಯೋ ಸಖತ್​ ವೈರಲ್​ ಆಗಿದೆ

ಜವಾನ್ ಸಿನಿಮಾಗೆ BJP ಸಪೋರ್ಟ್! ಶಾರುಖ್ ಗೆ ಥ್ಯಾಂಕ್ಸ್ ಎಂದ ಕೇಸರಿ ಪಡೆ