ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವ ಅವರ ತಂದೆ ಆನಂದ ಆಳ್ವ ನಿಧನರಾಗಿದ್ದಾರೆ
ಆನಂದ ಆಳ್ವ(106) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.
ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಆನಂದ ಆಳ್ವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೇ 106 ವರ್ಷದ ಆನಂದ್ ಅಳ್ವ ಇಂದು ನಿಧನರಾಗಿದ್ದಾರೆ.
ಇಂದು ತಮ್ಮ ಬದುಕಿನ 106ರ ವಸಂತದಲ್ಲಿ ಆನಂದ್ ಅಳ್ವ ನಿಧನರಾಗಿದ್ದಾರೆ.
1918ರಲ್ಲಿ ಜನಿಸಿದ್ದ ಆನಂದ ಆಳ್ವ ಅವರು ಕಂಬಳ, ದೈವಾರಾಧನೆ, ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು.
ಪುತ್ರ ಡಾ. ಎಂ. ಮೋಹನ ಆಳ್ವ ಅವರ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ತಂದೆ ಬೆಂಬಲವಾಗಿದ್ದರು.
ಆನಂದ್ ಅಳ್ವ ಪ್ರಗತಿ ಪರ ರೈತರೂ ಆಗಿದ್ದು, ಕೃಷಿಯಲ್ಲಿ ಹಲವು ಸಾಧನೆ ಮಾ
ಡಾ. ಎಂ. ಮೋಹನ ಆಳ್ವ ಸಹಿತ ಮೂವರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ.