ಅನಂತ್-ರಾಧಿಕಾ ಗೆಳೆತನದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ!
ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಬಾಲ್ಯದಿಂದಲೂ ಸ್ನೇಹಿತರಾಗಿ ಜೊತೆಯಲ್ಲಿ ಬೆಳೆದವರು.
ದಿನಗಳು ಕಳೆದಂತೆ ಇಬ್ಬರು ಹತ್ತಿರವಾಗುತ್ತ, ತಮ್ಮ ಭಾವನೆ, ಅನಿಸಿಕೆಗಳನ್ನು ಹಂಚಿಕೊಂಡರು.
ಭಾರತದ ಇಬ್ಬರು ದಿಗ್ಗಜ ಉದ್ಯಮಿಗಳ ಮನೆಯಲ್ಲಿ ಮದುವೆ
ಸಂಭ್ರಮ ಮನೆ ಮಾಡಿದೆ.
ಅನಂತ್ ಅಂಬಾನಿ ತಮ್ಮ ಬಾಲ್ಯದಿಂದ ಜೊತೆಯಾಗಿ ನಡೆದ
ಗೆಳೆತಿಯನ್ನೇ ಪ್ರೀತಿಸಿ ಮದುವೆ ಯಾಗಲಿದ್ದಾರೆ.
ಈಗ ಗುರು-ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನ ಪ್ರಾರಂಭಿಸಲಿದ್ದಾರೆ.
ಅಂಬಾನಿ ಅವರ ಮನೆಯಲ್ಲಿ ನೆರವೇರಿದ ಎಲ್ಲಾ ಸಮಾರಂಭಗಳಲ್ಲೂ ರಾಧಿಕಾ ಮರ್ಚೆಂಟ್ ಅವರು ಕಾಣಿಸಿಕೊಂಡರು.
2022ರ ಡಿಸೆಂಬರ್ ತಿಂಗಳಲ್ಲಿ ಇಬ್ಬರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
ಜುಲೈನಲ್ಲಿ ಮುಂಬೈ ಮಹಾನಗರದಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ನೆರವೇರಲಿದೆ.
ಸಮಾರಂಭಗಳು, ದಿನಾಂಕಗಳನ್ನು ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಖಚಿತಪಡಿಸಿದ್ದಾರೆ ಎನ್ನಲಾಗಿದೆ.