ರಾಜ್ಯದ ಮದ್ಯಪ್ರಿಯರಿಗೆ ಸದ್ಯದಲ್ಲೇ ಮತ್ತೊಮ್ಮೆ ಎಣ್ಣೆ ದರ ಏರಿಕೆಯ ಬಿಸಿ ತಟ್ಟಲಿದ್ದು, 

ಒಂದಲ್ಲ ಎರಡಲ್ಲ, ಬರೋಬ್ಬರಿ 8ರಿಂದ 10 ರೂಪಾಯಿ ತನಕ ಮದ್ಯದ ದರವನ್ನು ಏರಿಕೆ ಮಾಡಲು ಸರ್ಕಾರ ಮುಂದಾಗಿದೆ

ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನ ಶೇಕಡ ಹತ್ತರಷ್ಟು ಹೆಚ್ಚಿಸಲು ಚಿಂತನೆ ಮಾಡಲಾಗಿದ್ದು,

ಆ ಮೂಲಕ ದರ ಏರಿಕೆಯಾದಲ್ಲಿ ಬಿಯರ್ ದರ ₹8 to 10 ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದೆ

ಬಾವಿ ಏಕೆ ವೃತ್ತಾಕಾರದಲ್ಲಿ​ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!

ಇದೇ ತಿಂಗಳ ಆರಂಭದಲ್ಲಿ ಕೆಲ ಮದ್ಯ ಕಂಪನಿಗಳು ದರ ಏರಿಕೆ ಮಾಡಿದ್ದವು

ಇದೀಗ ಸದ್ಯ 650 ML ಬಾಟಲಿನ ಬಿಯರ್‌ಗೆ 8ರಿಂದ 10 ರೂಪಾಯಿ ಏರಿಕೆ ಮಾಡುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ

ಈ ಸಂಬಂಧ ಕರ್ನಾಟಕ ಅಬಕಾರಿ (ಸುಂಕಗಳು ಮತ್ತು ಶುಲ್ಕಗಳು) ನಿಯಮಕ್ಕೆ ತಿದ್ದುಪಡಿ 2024ರ ಕರಡನ್ನು ರಾಜ್ಯಪತ್ರದಲ್ಲಿ ಹೊರಡಿಸಲಾಗಿದೆ

ಜೊತೆಗೆ ಕರಡು ಪ್ರತಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ

ಜಸ್ಟ್​ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?

ಬಿಯರ್ ಮೇಲಿನ ಅಬಕಾರಿ ತೆರಿಗೆ ಮೂಲ ದರದ ಶೇಕಡಾ 185 ರಿಂದ ಶೇಕಡಾ 195 ಕ್ಕೆ ಏರಿಕೆ ಮಾಡಲು ಕರ್ನಾಟಕ ಅಬಕಾರಿ (ಸುಂಕಗಳು ಮತ್ತು ಶುಲ್ಕಗಳು) ನಿಯಮಕ್ಕೆ ತಿದ್ದುಪಡಿ 2024ರ ಕರಡನ್ನು ರಾಜ್ಯಪತ್ರದಲ್ಲಿ ಹೊರಡಿಸಲಾಗಿದೆ.

ಜನವರಿ ಕೊನೆಯ ವಾರ ಅಥವಾ ಫೆಬ್ರವರಿಯಲ್ಲಿ ಹೊಸ ನಿಯಮ ಜಾರಿಯಾಗುವ ಸಾಧ್ಯತೆ ಇದ್ದು,

 ಆ ಮೂಲಕ 6 ತಿಂಗಳಲ್ಲಿ ಎರಡನೇ ಬಾರಿಗೆ ಅಬಕಾರಿ ಸುಂಕ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ

ಜನವರಿ ಕೊನೆಯ ವಾರ ಅಥವಾ ಫೆಬ್ರವರಿಯಲ್ಲಿ ಹೊಸ ನಿಯಮ ಜಾರಿಯಾಗುವ ಸಾಧ್ಯತೆ ಇದ್ದು, ಆಮೂಲಕ 6 ತಿಂಗಳಲ್ಲಿ ಎರಡನೇ ಬಾರಿಗೆ ಅಬಕಾರಿ ಸುಂಕ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ