ನಮ್ಮ ಪಾದಗಳು ಚರ್ಮದ ಐದು ಪದರಗಳನ್ನು ಹೊಂದಿರುತ್ತವೆ. ವಿಶೇಷವಾಗಿ ಅವು ದೇಹದ ಇತರ ಭಾಗಗಳಂತೆ ಕೂದಲಿನ ಕಿರುಚೀಲಗಳನ್ನು ಹೊಂದಿರುವುದಿಲ್ಲ,
ಆದ್ದರಿಂದ ನಾವು ಯಾವುದೇ ಎಣ್ಣೆಯನ್ನು ಉಜ್ಜಿದರೂ ತಕ್ಷಣವೇ ಹೀರಿಕೊಳ್ಳುತ್ತದೆ
ಸಾಮಾನ್ಯವಾಗಿ ದೇಹಕ್ಕೆ ರಾತ್ರಿ ಅಥವಾ ಬೆಳಗ್ಗೆ ಹೊತ್ತು ಮಸಾಜ್ ಮಾಡಿಕೊಳ್ಳುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ
ಇದರಿಂದ ಉತ್ತಮ ನಿದ್ರೆ ಕೂಡ ಪಡೆಯಬಹುದು. ಹಾಗಾಗಿ ಎಷ್ಟೋ ಮಂದಿ ಅದರಲ್ಲಿಯೂ ಮಲಗುವ ಮುನ್ನ ಪಾದಗಳಿಗೆ ಮಸಾಜ್ ಮಾಡಿಕೊಂಡು ಮಲಗುತ್ತಾರೆ
ಮಕರ ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ರೆಸಿಪಿ ಇಲ್ಲಿದೆ ನೋಡಿ
ಏಕೆಂದರೆ 70 ಸಾವಿರಕ್ಕೂ ಹೆಚ್ಚು ನರಗಳು ನಮ್ಮ ಪಾದಗಳಲ್ಲಿ ಕೊನೆಗೊಳ್ಳುತ್ತವೆ. ಅವುಗಳಲ್ಲಿ ಪ್ರತಿಯೊಂದೂ ನಮ್ಮ ದೇಹದ ಭಾಗಗಳಿಗೆ ಸಂಬಂಧಿಸಿದೆ
ಪ್ರತಿದಿನ ಆರೊಮ್ಯಾಟಿಕ್ ಎಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡುವುದರಿಂದ ಎದೆನೋವು ನಿವಾರಣೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ಪಾದಗಳಲ್ಲಿ ಎಣ್ಣೆ ಗ್ರಂಥಿಗಳಿಲ್ಲದ ಕಾರಣ, ಎಣ್ಣೆಯನ್ನು ಪಾದಗಳಿಗೆ ಅನ್ವಯಿಸಿದಾಗ, ಅದು ಬೇಗನೆ ಹೀರಲ್ಪಡುತ್ತದೆ
ಹೀಗೆ ಹೀರಲ್ಪಡುವ ತೈಲಗಳು ರಕ್ತನಾಳಗಳಲ್ಲಿ ವೇಗವಾಗಿ ಸಂಚರಿಸಿ ಪ್ರಯೋಜನಗಳನ್ನು ಉಂಟುಮಾಡುತ್ತದೆ
ಕಬ್ಬು ತಿಂದ್ಮೇಲೆ ನಾಲಿಗೆ ಉರಿ ಬರಲು ಕಾರಣವೇನು ಗೊತ್ತಾ?
ಪಾದದ ಅಡಿಭಾಗಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿದಾಗ 20 ನಿಮಿಷದಲ್ಲಿ ಎಣ್ಣೆ ದೇಹಕ್ಕೆ ಹರಡುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ
ಮಲಗುವ ಮುನ್ನ ಲ್ಯಾವೆಂಡರ್ ಎಣ್ಣೆಯನ್ನು ಕಾಲುಗಳ ಒಳಭಾಗಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ
ಅಥವಾ ಪುದೀನಾ ಮತ್ತು ಲವಂಗ ಎಣ್ಣೆಯನ್ನು ಬಳಸಿ ಮಸಾಜ್ ಮಾಡುವುದರಿಂದ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಬಹುದು
ಹಾಗೆಯೇ ನೀಲಗಿರಿ ಎಣ್ಣೆಯನ್ನು ಉಜ್ಜುವುದರಿಂದ ಉಸಿರಾಟ ಮತ್ತು ಶ್ವಾಸಕೋಶದ ತೊಂದರೆಗಳು ನಿವಾರಣೆಯಾಗುತ್ತವೆ
ನಿಮಗೆ ಈ ಸಮಸ್ಯೆಗಳಿದ್ದರೆ ಎಂದಿಗೂ ಕಾಫಿ ಕುಡಿಯಲೇ ಬೇಡಿ!