ಆಟೋ ಡ್ರೈವರ್ ಹಗಲು ದರೋಡೆಗೆ ಬೇಸತ್ತು ನಡ್ಕೊಂಡೇ ಆಸ್ಪತ್ರೆಗೆ ಬಂದ ಅಪ್ಪ-ಮಗ!

ಅನಾರೋಗ್ಯ ಪೀಡಿತ ಪುತ್ರನನ್ನು 3.5 ಕಿಲೋ ಮೀಟರ್ ದೂರ ನಡೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ

ಕಲಬುರಗಿ ಮೂಲದ ಹನುಮಂತ ರೆಡ್ಡಿ ಎಂಬವರು ಇಂದು ಬೆಳಗ್ಗೆ ಮಗನ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದರು. ಬೆಳಗ್ಗೆ 6 ಗಂಟೆಗೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಆಟೋ ಕೇಳಿದಾಗ, ಚಾಲಕರು 600 ರೂ.ಯಿಂದ 800 ರೂಪಾಯಿ ಕೇಳಿದ್ದಾರೆ

ಸಾಮಾನ್ಯ ದರಕ್ಕೆ ಯಾವ ಚಾಲಕರು ಬಾರದ ಹಿನ್ನೆಲೆ ಹನುಮಂತ ಮಗನೊಂದಿಗೆ 3.5 ಕಿಲೋ ಮೀಟರ್ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಯಾವ ಚಾಲಕರು ಆಸ್ಪತ್ರೆಗೆ ಬರಲು ಒಪ್ಪಲಿಲ್ಲ ಎಂದು ಹನುಮಂತ ರೆಡ್ಡಿ ಹೇಳುತ್ತಾರೆ

ನ್ಯೂಸ್ 18 ಜೊತೆ ಮಾತನಾಡಿದ ಹನುಮಂತ ರೆಡ್ಡಿ, ಬಂದ್ ಇರೋದು ಗೊತ್ತಿತ್ತು. ಆಸ್ಪತ್ರೆಗೆ ಬರೋ ಅನಿವಾರ್ಯತೆ ಇತ್ತು. ಹಾಗಾಗಿ ಇಂದು ಬೆಳಗ್ಗೆ ಆರು ಗಂಟೆಗೆ ಮಗನೊಂದಿಗೆ ಬಂದೆ ಎಂದು ಹೇಳಿದರು

ರೈಲ್ವೆ ನಿಲ್ದಾಣದ ಬಳಿಯಲ್ಲಿದ್ದ ಆಟೋ ಚಾಲಕರು 600 ರೂ.ಗಳಿಂದ 800 ರೂಪಾಯಿ ಹಣ ಕೇಳಿದರು. ಹಾಗಾಗಿ ಮಗನ ಜೊತೆ ನಡೆದುಕೊಂಡೇ ಬಂದೆ. ನಂತರ ಮಗನನ್ನು ಆಸ್ಪತ್ರೆಗೆ ದಾಖಲಿಸಿದೆ ಎಂದರು

ಊರು ಗೊತ್ತಿಲ್ಲದ ಜನರ ಬಳಿ ಮಾತನಾಡಲು ಹಿಂಜರಿಕೆ ಆಯ್ತು. ಹೀಗಾಗಿ 3.5 ಕಿಲೋ ಮೀಟರ್ ನಡ್ಕೊಂಡು ಕರೆಸ್ಕೊಂಡು ಬಂದೆ. ನನ್ನ ಕಾಲಿಗೂ ಫ್ರ್ಯಾಕ್ಚರ್ ಆಗಿದೆ ಎಂದು ಹೇಳಿದರು

ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆ KSRTC ಬಸ್ ನಿಲ್ದಾಣದಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ

ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಹೆಚ್ಚುವರಿ ಬಸ್ ಇಳಿಸಲು  KSRTC ಅಧಿಕಾರಿಗಳಿಗೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ

ಬಾಡಿಗೆಗೆ ಹೋಗುತ್ತಿದ್ದ ವಾಹನವನ್ನು ತಡೆದು ಚಾಲಕನಿಗೆ ಪೇಟ ತೊಡಿಸಿ ಹಾರ ಹಾಕಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ