ಸರ್ವಾಲಂಕೃತ ಭೂಷಿತನಾದ ಶ್ರೀರಾಮ!

ಬಂದೇ ಬಿಟ್ಟ ಬಾಲರಾಮ, ಎಲ್ಲೆಲ್ಲೂ ಸಂಭ್ರಮ!

ಅಯೋಧ್ಯೆ ರಾಮಮಂದಿರದಲ್ಲಿ  ಬಾಲ ರಾಮ ವಿರಾಜಾಮಾನನಾಗಿದ್ದಾನೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಸಂಪೂರ್ಣ ವಾಗಿದೆ.

ಜನವರಿ 23ರಿಂದ ರಾಮಮಂದಿರ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ.

ಅಯೋಧ್ಯೆಯ ಗರ್ಭಗುಡಿಯಲ್ಲಿ 5 ವರ್ಷದ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ರಾಮನ ವಿಗ್ರಹವು 51 ಇಂಚು ಎತ್ತರವಾಗಿದೆ.

ವಿಷ್ಣುವಿನ ಹಲವಾರು ಅವತಾರಗಳನ್ನು ಈ ವಿಗ್ರಹದ ಬದಿಗಳಲ್ಲಿ ಮತ್ತು ಮೇಲ್ಭಾಗದಲ್ಲಿ ಕೆತ್ತಲಾಗಿದೆ.

ಭಕ್ತರು ಅಯೋಧ್ಯೆಗೆ ಭೇಟಿ ಕೊಟ್ಟು ಪ್ರಭು ರಾಮನ ದರ್ಶನವನ್ನು ಪಡೆಯಬಹುದು.

ಎಲ್ಲೆಡೆ ಭಗವಾನ್ ರಾಮನ ಅತ್ಯಂತ ಆಕರ್ಷಕ ವಿಗ್ರಹದ ಫೋಟೋ ಹರಿದಾಡುತ್ತಿದೆ.