ಅಬ್ಬಬ್ಬಾ! ಈ ಜಿಲೇಬಿಯನ್ನು ನೀವೊಬ್ರೇ ತಿನ್ನಿ ನೋಡೋಣ!

ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಬಾಹುಬಲಿ ಜಿಲೇಬಿಗಳನ್ನು ತಯಾರಿಸಲಾಗುತ್ತದೆ.

ಈ ದೊಡ್ಡ ಗಾತ್ರದ ಜಿಲೇಬಿಯ ದರ 300 ರಿಂದ700 ರೂಪಾಯಿಗಳವರೆಗೆ ಇರುತ್ತದೆ.

ಈ ಗಜಗಾತ್ರದ ಒಂದು ಜಿಲೇಬಿ ಎರಡರಿಂದ 4 ಕೆಜಿ ತೂಗುತ್ತದೆ.

ಈ ಜಿಲೇಬಿಯನ್ನು ಕೆಂಜಕೂರ ಎಂಬ ಪ್ರದೇಶದಲ್ಲಿ ಪ್ರತಿ ವರ್ಷ ತಯಾರಿಸಲಾಗುತ್ತದೆ.

ಭದ್ರಾ ಮಾಸ ಪೂರ್ತಿ ಜನಪದ ಹಾಡುಗಳ ಮೂಲಕ ಮನೆ ಮನೆಗೆ ಭಾದು ಪೂಜೆಗಳು ನಡೆಯುತ್ತವೆ.

ಈ ಸಂದರ್ಭದಲ್ಲಿ ನೆರೆಹೊರೆಯವರಿಗೆ ಜಿಲೇಬಿ ಕೊಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗಿದೆ.

ಈ ಬಾಹುಬಲಿ ಜಿಲೇಬಿಯನ್ನು ಒಬ್ಬರೇ ತಿನ್ನುವುದು ಕಷ್ಟ.

ಅನೇಕ ಜನರು ತಮ್ಮ ಸಂಬಂಧಿಕರಿಗೆ ಈ ಜಿಲೇಬಿಯನ್ನು ಉಡುಗೊರೆಯಾಗಿ ನೀಡುತ್ತಾರೆ.

ಈ ಜಿಲೇಬಿಯನ್ನು ಜಾರ್ಖಂಡ್ ರಾಜ್ಯದಲ್ಲೂ ಭದ್ರಾ ಸಂಕ್ರಾಂತಿಯಂದು ತಿನ್ನುತ್ತಾರೆ.