ದೇವಸ್ಥಾನದ ಪ್ರಾರಂಭದಲ್ಲಿ ಬಾಗಿಲಿನ ಚೌಕಟ್ಟಿಗೆ ಗೌಂಡಿಗಳು ಗಣಪತಿಯ ಚಿತ್ರ ಬಿಡಿಸಿದ್ದರು. ತಕ್ಷಣ ಹೊರಗೆ ಬರುತ್ತಿದ್ದ ವ್ಯಾಸರಾಯರನ್ನು ಯಾವುದೋ ಶಕ್ತಿ ತಡೆಯಿತು. ಕಡೆಗೆ ಧ್ಯಾನ ಮಾಡಲು ಶುರು ಮಾಡಿದಾಗ, ಆ ಚಿತ್ರದಲ್ಲೇ ಗಣೇಶನ ಸಾನಿಧ್ಯವಿರುವುದು ತಿಳಿಯಿತು. ಹೀಗಾಗಿ ಬೆಳ್ಳಿಯ ಉಬ್ಬುಶಿಲ್ಪದ ಗಣೇಶನನ್ನು ವ್ಯಾಸರಾಯರು ಇಲ್ಲಿ ಪ್ರತಿಷ್ಠಾಪಿಸಿದರು.