ಭಾರತದಲ್ಲಿ ಬಲಮುರಿ ಹಾಗೂ ಎಡಮುರಿ ಗಣಪತಿಗೆ ಸಾಕಷ್ಟು ವಿಶೇಷತೆಯಿದ್ದು ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಪೂಜೆ ಮಾಡುತ್ತಾರೆ
ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ ಹಾಗೂ ಮಧ್ಯದಲ್ಲಿದ್ದರೆ ಊರ್ಧ್ವ ಮೂಲ ಗಣಪತಿಯೆಂದು ಕರೆಯುವುದುಂಟು
ಬಲಮುರಿ ಗಣಪತಿ ಎಡಮುರಿ ಗಣಪತಿಗಿಂತ ಬಲಮುರಿ ಗಣಪತಿಯೇ ವಿಶೇಷವೆಂದು ಹೇಳುವುದುಂಟು
ಸೊಂಡಿಲು ಬಲಗಡೆಗೆ ತಿರುಗಿದ್ದರೆ ದಕ್ಷಿಣಮೂರ್ತಿ ಎಂದು ಹೇಳಲಾಗುತ್ತದೆ
ದಕ್ಷಿಣ ದಿಕ್ಕು ಅಥವಾ ಬಲಬದಿಯು ಸೂರ್ಯನಾಗಡಿಗೆ ಸಂಬಂಧಪಟ್ಟಿದ್ದು, ಈ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ
ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಬಹಳ ಶಕ್ತಿಶಾಲಿಯಾಗಿರುತ್ತಾರೆ
ಸಾತ್ವಿಕತೆ ಹೆಚ್ಚುತ್ತದೆ. ದಕ್ಷಿಣ ದಿಕ್ಕಿನಿಂದ ಬರುವ ಯಾವುದೇ ಕೆಲಸಗಳಿಗೂ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆ
ಮತ್ತೊಂದೆಡೆ ಬಲಮುರಿ ಗಣೇಶನಿಂದ ಎಷ್ಟು ಒಳ್ಳೆಯದೋ ಅದೇ ರೀತಿಯಲ್ಲಿ ಕೆಲವರಿಗೆ ತೊಡಕಾಗುವುದೂ ಉಂಟು ಎಂದು ಹೇಳುತ್ತಾರೆ
ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ
ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ಕಾರಣವಾಗಬಹುದೆನ್ನುತ್ತಾರೆ
Vastu Tips: ಪೂಜೆಯ ರೂಂನಲ್ಲಿ ಈ ವಸ್ತುಗಳಿದ್ರೆ ಒಳ್ಳೆಯದಾಗಲ್ಲ, ಬರೀ ಕೆಟ್ಟದ್ದಾಗುತ್ತೆ