ತಲೆದಿಂಬಿನ ಅಡಿ ಬೆಳ್ಳುಳ್ಳಿ ಇಡಿ, ನೆಮ್ಮದಿಯಾಗಿ ನಿದ್ದೆ ಮಾಡಿ!
ಭಾರತದಲ್ಲಿ ಪ್ರತಿ ಅಡುಗೆ ಮನೆಯಲ್ಲೂ ಇರಲೇಬೇಕಾದ ಅಡುಗೆ ಪದಾರ್ಥ ಬೆಳ್ಳುಳ್ಳಿ.
ಬೆಳ್ಳುಳ್ಳಿಯನ್ನು ರಾತ್ರಿ ವೇಳೆ ತಿಂದರೆ ಒಳ್ಳೆಯದು ಅಂತ ಹೇಳಲಾಗುತ್ತದೆ.
ರಾತ್ರಿ ಹೊತ್ತು ತಲೆ ದಿಂಬಿನ ಬಳಿ ಬೆಳ್ಳುಳ್ಳಿ ಎಸಳು ಇಟ್ಟುಕೊಂಡರೆ, ಸೊಳ್ಳೆಗಳ ಕಾಟ ತಪ್ಪುತ್ತದೆ.
ಇದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ.
ಬೆಳ್ಳುಳ್ಳಿ ವಿಶೇಷತೆಯೆಂದರೆ ಇದು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ.
ಬೆಳ್ಳುಳ್ಳಿಯು ನರಗಳನ್ನು ಶಾಂತಗೊಳಿಸಿ ಬೇಗ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ.
ಪ್ರಶಾಂತ ನಿದ್ರೆಗಾಗಿ ಬೆಳ್ಳುಳ್ಳಿಯ ಎಸಳನ್ನು ಮಲಗುವ ಜಾಗದಲ್ಲಿ ಇಟ್ಟುಕೊಳ್ಳಲಾಗುತ್ತದೆ.
ಬೆಳ್ಳುಳ್ಳಿ ತಿನ್ನುವುದರಿಂದ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚಾಗಿ ಕಾಯಿಲೆಗಳ ವಿರುದ್ಧ ಹೋರಾಡಲು ಶಕ್ತಿ ತುಂಬುತ್ತದೆ.
ಪ್ರತಿ ದಿನ ರಾತ್ರಿ 1 ಬೆಳ್ಳುಳ್ಳಿ ಎಸಳು ತಿನ್ನುವುದರಿಂದ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು.