ಏನಿದು HSRP ನಂಬರ್ ಪ್ಲೇಟ್ ಎಂದು ನೋಡೋದಾದ್ರೆ, ಇದು ನಿಮ್ಮ ವಾಹನಕ್ಕೆ ಶಾಶ್ವತ ಗುರುತಿನ ನಂಬರ ಒದಗಿಸುತ್ತದೆ

ಇದು ರಸ್ತೆಯಲ್ಲಿ ವಾಹನ ಸಂಚರಿಸುವಾಗಲೇ ವಾಹನವನ್ನು ಗುರುತಿಸಲು ಸಹಕರಿಸುತ್ತದೆ

ಸಾರ್ವಜನಿಕರೇ, ನಿಮ್ಮ ವಾಹನ ಏಪ್ರಿಲ್ 1, 2019ಕ್ಕೂ ಮುನ್ನ ನೋಂದಣಿ ಆಗಿದೆಯೇ? ಹಾಗಿದ್ದರೆ ಕರ್ನಾಟಕ ಸಾರಿಗೆ ಇಲಾಖೆ ನಿಮಗೊಂದು ಮಹತ್ವದ ಸೂಚನೆ ನೀಡಿದೆ

ಇದೇ ಮುಂಬರುವ ನವೆಂಬರ್ 17ರ ಒಳಗೆ ನಿಮ್ಮ ವಾಹನಕ್ಕೆ HSRP ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ

ನವೆಂಬರ್ 17ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದಲ್ಲಿ 500ರೂ.ವಿನಿಂದ 1 ಸಾವಿರ ರೂ.ವರೆಗೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ

ಒಂದು ಅಂದಾಜಿನ ಪ್ರಕಾರ ಸುಮಾರು 1.75 ಕೋಟಿಯಿಂದ 2 ಕೋಟಿ ವಾಹನಗಳಿಗೆ ಏಪ್ರಿಲ್ 1, 2019ಕ್ಕೂ ಮುನ್ನ ನೋಂದಣಿಯಾಗಿದೆ

ಏನಿದು HSRP ನಂಬರ್ ಪ್ಲೇಟ್ ಎಂದು ನೋಡೋದಾದ್ರೆ, ಇದು ನಿಮ್ಮ ವಾಹನಕ್ಕೆ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ

ಇದು ರಸ್ತೆಯಲ್ಲಿ ವಾಹನ ಸಂಚರಿಸುವಾಗಲೇ ವಾಹನವನ್ನು ಗುರುತಿಸಲು ಸಹಕರಿಸುತ್ತದೆ

HSRP ನಂಬರ್‌ ಪ್ಲೇಟ್‌ಗಳಲ್ಲಿ ಲೇಸರ್ ತಂತ್ರಜ್ಷಾನದ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ವಾಹನ ಕಳುವಾದಲ್ಲಿ ಪತ್ತೆಗೆ ಸಹಕಾರಿಯಾಗುತ್ತದೆ

4 ಚಕ್ರದ ವಾಹನಗಳಿಗೆ 400 ರೂ.ವಿನಿಂದ 500 ರೂ. ನೀಡಿ ಈ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ, ಇನ್ನು ದ್ವಿಚಕ್ರ ವಾಹನಗಳಿಗೆ 250 ರೂ.ವಿನಿಂದ 300 ರೂ.ಗೆ ಈ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ