ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು ಬರೋಬ್ಬರಿ 206 ಮರಗಳು ಧರಾಶಾಹಿ!
ರಾಜ್ಯ ರಾಜಧಾನಿಯಲ್ಲಿ ರಾತ್ರಿ ಸುರಿದ ಮಳೆಗೆ ನಗರದ ಬಹುತೇಕ ಮರಗಳು ಧರೆಗುರುಳಿವೆ.
ಬೆಂಗಳೂರಿನ 38 ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ದೂರು ಬಂದಿವೆ.
ರಾಜಧಾನಿಯಲ್ಲಿ ಒಂದೇ ಸಮನೆ ಸುರಿದ ಬಿರುಸಿನ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ.
ಚಲಿಸುತ್ತಿದ್ದ ಕಾರು ಮತ್ತು ಆಟೋ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ
ಸದ್ಯ ಕಾರು, ಆಟೋದಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ, ಎರಡು ವಾಹನಗಳು ಜಖಂಗೊಂಡಿದೆ.
ಭಾರೀ ಮಳೆ ಕಾರಣದಿಂದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ತುಂಬಿ ಹರಿಯುತ್ತಿದೆ.
ಹೆದ್ದಾರಿಯಲ್ಲಿ ನೀರು ನಿಂತ ಹಿನ್ನಲೆ ಸುಮಾರು 5km ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರು, ರಾಮನಗರ, ಬೀದರ್ ಸೇರಿ ಹಲವಾರು ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದ ಸುರಿಯುತ್ತಿರುವ ಮಳೆ ಹಲವಾರು ಹವಾಂತರ ಸೃಷ್ಟಿಸಿದೆ.
ಭಾರೀ ಗಾಳಿ ಸಹಿತ ಸುರಿದ ಮಳೆಯಿಂದ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ರೈಲು ಹಳಿ ಮೇಲೆ ಬಿದ್ದಿದೆ.