ಬೆಂಗಳೂರಿನ ಮನೆಗಳಲ್ಲಿ ಜಿರಳೆ ಓಡಿಸುವುದು ಹೇಗೆ?

ಬೆಂಗಳೂರಿನ ಹೆಚ್ಚಿನ ಜನ ಬಾಡಿಗೆ ಮನೆಯಲ್ಲಿ ಇರ್ತಾರೆ. ಬಾಡಿಗೆ ಮನೆಯಲ್ಲಿರುವ ಜನರ ಸಮಸ್ಯೆ ಎಂದ್ರೆ ಜಿರಳೆ.

ಆಹಾರವನ್ನು ಬಿಡಬೇಡಿ- ನಿಮ್ಮ ಮನೆಯಲ್ಲಿ ಜಿರಳೆ ಕಡಿಮೆ ಆಗಬೇಕು ಎಂದ್ರೆ ನೀವು ಆಹಾರವನ್ನು ಬಿಡಬಾರದು.

ನೀವು ಊಟ, ತಿಂಡಿಯನ್ನು ಮುಚ್ಚಿಡದೇ ಇದ್ದಾಗ, ಜಿರಳೆ ಆಕರ್ಷಿತವಾಗುತ್ತವೆ. ಆಹಾರ ಹುಡುಕಿಕೊಂಡು ಬರುತ್ತವೆ.

ಸೂರ್ಯನ ಬೆಳಕು ಬರಲಿ-ನಿಮ್ಮ ಮನೆ ಒಳಗೆ ಸೂರ್ಯನ ಬೆಳಕು ಬರುವಂತೆ ಇದ್ರೆ ಬಾಗಿಲುಗಳನ್ನು ತೆರೆದಿಡಿ.

ನೀರಿನಂಶವನ್ನು ಕಡಿಮೆ ಮಾಡಿ- ಜಿರಳೆಗಳು 7 ದಿನಗಳಿಗಿಂತ ಹೆಚ್ಚಿನ ಕಾಲ ನೀರಿಲ್ಲದೆ ಬದುಕಲಾರವು.

ನೆಲದ ಬಲವಾದ ಪರಿಮಳಯುಕ್ತ ದ್ರವದಂತಹ ಸಿಟ್ರೋನೆಲ್ಲಾ ಎಣ್ಣೆ ಅಥವಾ ಯಾವುದೇ ಔಷಧೀಯ ಫಿನೈಲ್ ಗಳೊಂದಿಗೆ ನಿಯಮಿತವಾಗಿ ಸ್ವಚ್ಛಗೊಳಿಸಿ

ಜಿರಳೆ ಔಷಧಿಗಳ ಬಳಕೆ- ಜಿರಳೆ ನಿವಾರಣೆಗೆ ಇರುವ ಸ್ಪ್ರೇ, ಮಾತ್ರೆ, ಅಗರಬತ್ತಿಗಳಂತಹ ಔಷಧಗಳನ್ನು ಬಳಸಬಹುದು.

ಧೂಳು ಹಾಗೂ ಗಲೀಜುಗಳಿರುವ ಪ್ರದೇಶದಲ್ಲಿ ಜಿರಳೆ ಬಹುಬೇಗ ಹುಟ್ಟನ್ನು ಅಥವಾ ಪ್ರವೇಶವನ್ನು ಪಡೆದುಕೊಳ್ಳುತ್ತದೆ.

ಸ್ವಚ್ಛತೆ-ಮನೆಯ ಒಳಗೆ ಆದಷ್ಟು ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು