ಆಗಸ್ಟ್ 1ರಿಂದಲೇ ಪ್ರಮುಖ ಬದಲಾವಣೆ
ಆಗಸ್ಟ್ 1 ರಿಂದಲೇ ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧ ವಿಧಿಸಲಾಗಿದೆ
ಈ ಕುರಿತು ರಸ್ತೆ ಸುರಕ್ಷಾ ಮತ್ತು ಸಂಚಾರಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಖಚಿತಪಡಿಸಿದ್ದಾರೆ
ಈ ಬಗ್ಗೆ ಕಳೆದ ಜುಲೈ 12ರಂದು ಗೆಜಟ್ ನೋಟಿಫಿಕೇಷನ್ ಆಗಿದೆ
ಅಪಘಾತ ಪ್ರಕರಣಗಳ ಕಡಿಮೆ ಮಾಡಲು ಎಲ್ಲಾ ರೀತಿಯ ಕ್ರಮವಹಿಸಿದ್ದೇವೆ
ಈಗಾಗಲೇ ದಂಡ ಹಾಕುವ ಮೂಲಕ ನಿಯಮ ಉಲ್ಲಂಘನೆ ಆಗದಂತೆ ಎಚ್ಚರಿಕೆ ನೀಡಲಾಗ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ
ಈ ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿದ 27 ಮಂದಿ ಡಿಎಲ್ ಕ್ಯಾನ್ಸಲ್ಗೆ ಶಿಫಾರಸು ಮಾಡಿದ್ದೇವೆ
ಆ್ಯಪ್ ಮೂಲಕ ನಿಯಮ ಉಲ್ಲಂಘನೆ ಮೆಸೇಜ್ ರವಾನೆ ಆಗ್ತಿದೆ ಎಂದು ಅವರು ತಿಳಿಸಿದ್ದಾರೆ
ಸದ್ಯ ಕಳೆದ ಒಂದು ತಿಂಗಳಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ
ಒಟ್ಟಾರೆ ಈ ಎಲ್ಲ ನಿಯಮಗಳ ನಂತರವಾದರೂ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತಗಳು ನಿಲ್ಲುತ್ತಾ ಎಂದು ಕಾದುನೋಡಬೇಕಿದೆ