ವಿದ್ಯುತ್ ಅಕ್ರಮವಾಗಿ ಪಡೆದರೆ ಜೈಲು ಶಿಕ್ಷೆ ಇದ್ಯಾ?

ನಿಮ್ಮ ಸುತ್ತಮುತ್ತಲಿನ ಮನೆಗಳಲ್ಲಿ-ಏರಿಯಾದಲ್ಲಿ ಯಾರಾದರೂ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರಾ?

ಅಕ್ರಮ ಸಂಪರ್ಕ ತಡೆಯಲು ಏನು ಮಾಡಬೇಕು? ಅಕ್ರಮ ಸಂಪರ್ಕ ಪಡೆದವರಿಗೆ ಶಿಕ್ಷೆ ಕಾದಿದೆಯೇ?

ಬೆಸ್ಕಾಂ ಮಾಹಿತಿಯ ಪ್ರಕಾರ ಅಕ್ರಮ ವಿದ್ಯುತ್ ಸಂಪರ್ಕಪಡೆದರೆ ಯಾವುದೇ ಶಿಕ್ಷೆ ವಿಧಿಸಲು ಅವಕಾಶ ಇಲ್ಲ.

ಆದರೆ ಯಾರು ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿರುತ್ತಾರೋ ಅವರಿಗೆ ದಂಡ ವಿಧಿಸಲು ಮಾತ್ರ ಅವಕಾಶ ಇದೆ.

50 ಸಾವಿರದವರೆಗೆ ದಂಡ ವಿಧಿಸಲು ಅವಕಾಶ ಇದೆ ಎಂದು ಬೆಸ್ಕಾಂ ಮೂಲಗಳು ನ್ಯೂಸ್18 ಗೆ ತಿಳಿಸಿವೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ.

ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಕಾನೂನು ಪ್ರಕಾರ ತಪ್ಪು.

ಇದು ವಿದ್ಯುತ್ ಶಾಕ್ ಅಥವಾ ಜೀವಹಾನಿಯಂತಹ ಅನಾಹುತಕ್ಕೂ ಕಾರಣವಾಗಬಹುದು.

ನಿಮ್ಮ ಪ್ರದೇಶಗಳಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಂಡುಬಂದರೆ ಬೆಸ್ಕಾಂ ಗಮನಕ್ಕೆ ತರಬಹುದಾಗಿದೆ.