ಎರಡು ವರ್ಷಗಳ ಹಿಂದೆ ವಿಶ್ವದ ದೇಶಗಳನ್ನು ಬೆಚ್ಚಿಬೀಳಿಸಿದ್ದ ಕರೋನಾ ಮಹಾಮಾರಿಯಿಂದ ಈಗ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ

ಆದರೆ ಇದೀಗ ಮತ್ತೊಂದು ರೋಗ ಆತಂಕವನ್ನು ಉಂಟುಮಾಡುತ್ತದೆ. ಪಕ್ಕದ ಆಂಧ್ರ ರಾಜ್ಯದಲ್ಲೇ ಹಬ್ಬುತ್ತಿರುವ ಹಕ್ಕಿಜ್ವರ ಎಲ್ಲರನ್ನೂ ಆತಂಕಕ್ಕೆ ದೂಡುತ್ತಿದೆ

ಆಂಧ್ರ ಪ್ರದೇಶದಲ್ಲಿ ಹಕ್ಕಿ ಜ್ವರ ಸಂಚಲನ ಮೂಡಿಸುತ್ತಿದೆ. ನೆಲ್ಲೂರಿನಲ್ಲಿರುವ ಕೆಲವು ಕೋಳಿ ಫಾರಂಗಳಲ್ಲಿ ಭಾರೀ ಸಂಖ್ಯೆಯಲ್ಲಿ ಕೋಳಿಗಳು ಸಾಯುತ್ತಿವೆ

ಅವುಗಳ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಹಕ್ಕಿಜ್ವರದಿಂದ ಸಾವನ್ನಪ್ಪಿರುವುದು ಪತ್ತೆಯಾಗಿದೆ

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತು ಪೊದಲಕೂರು, ಕೋವೂರು, ಸೈದಾಪುರ ಭಾಗದಲ್ಲಿ ಕೋಳಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ

ಕೋಳಿಗಳ ಸಾವಿಗೆ ಹಕ್ಕಿಜ್ವರವೇ ಕಾರಣ ಎಂದು ವರದಿ ಬಹಿರಂಗಪಡಿಸಿದೆ. ಇದರಿಂದ ಅಧಿಕಾರಿಗಳು ಎಚ್ಚೆತ್ತಿದ್ದಾರೆ

ಜಿಲ್ಲಾಧಿಕಾರಿ ಶುಕ್ರವಾರ ಪಶುಸಂಗೋಪನಾ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದು, ಹಕ್ಕಿಜ್ವರ ಹರಡದಂತೆ ತಕ್ಷಣ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ

ಹಕ್ಕಿಜ್ವರದಿಂದ ಕೋಳಿಗಳು ಸಾವನ್ನಪ್ಪಿದ ಪ್ರದೇಶದಿಂದ ಒಂದು ಕಿಲೋಮೀಟರ್ ದೂರದಲ್ಲಿ ಮೂರು ತಿಂಗಳ ಕಾಲ ಕೋಳಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

Fitness Tips: ಈ ತಪ್ಪುಗಳನ್ನು ಮಾಡುತ್ತಿದ್ದರೆ ಜಪ್ಪಯ್ಯ ಅಂದ್ರೂ ನಿಮ್ಮ ತೂಕ ಕಡಿಮೆ ಆಗಲ್ಲ ಎಚ್ಚರ!

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೋಳಿ ಮತ್ತು ಮೊಟ್ಟೆ ತಿನ್ನದಂತೆ ಜನರಿಗೆ ಸೂಚಿಸಲಾಗಿದೆ

ಸದ್ಯ ನೆಲ್ಲೂರು ಜಿಲ್ಲೆಯಲ್ಲಿ ಮಾತ್ರ ಈ ರೋಗ ಕಾಣಿಸಿಕೊಂಡಿದೆ. ಬೇರೆಲ್ಲೂ ಇಲ್ಲ. ಆದರೆ ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ

 ನಿಮ್ಮ ಪ್ರದೇಶದಲ್ಲಿ ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿವೆ ಎಂಬ ಮಾಹಿತಿ ಬಂದರೆ ಅಲ್ಲಿ ಕೋಳಿ ತಿನ್ನುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ

ಕೋಳಿ, ಮೊಟ್ಟೆ ಬೆಲೆ ಭಾರೀ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಕೋಳಿ ವ್ಯಾಪಾರಿಗಳೂ ಆತಂಕಕ್ಕೆ ಒಳಗಾಗಿದ್ದಾರೆ

Home Interior: ನಿಮ್ಮ ಮನೆಯ ಫ್ಯಾನ್​ ಸ್ಪೀಡಾಗಿ ತಿರುಗ್ತಲ್ವಾ? ಹೀಗೆ ಮಾಡಿ ವೇಗ ಹೆಚ್ಚಿಸಿ!