ಮನುಷ್ಯರ ದೇಹದ ಮೇಲೆ ಅವಲಂಬಿತವಾಗಿರುವ ಪ್ರಾಣಿ ಎಂದರೆ ಅದು ತಿಗಣೆ
ಇವುಗಳಿಗೆ ಇಂತಹದೇ ನಿರ್ದಿಷ್ಟ ಸ್ಥಳ ಎಂಬುದಿಲ್ಲ. ಎಲ್ಲಿ ಬೇಕಾದರೂ ಕಾಣಿಸಬಹುದು. ಇವುಗಳಿಗೆ ಹಾರಲು ಸಾಧ್ಯವಿಲ್ಲ
ಬಹಳ ಚಿಕ್ಕದಾಗಿರುವ ಕಾರಣ ಇವು ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ
ಅದರಲ್ಲಿಯೂ ಒಂದು ಬಾರಿ ತಿಗಣೆ ಕಚ್ಚಿದರೆ ಅದರಿಂದ ಭಾರೀ ಉರಿ ಮತ್ತು ಕೆರೆತ ಉಂಟಾಗುತ್ತದೆ
ಇನ್ನು ಮುಂದೆ ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕೂರುವಂತಿಲ್ಲ; ಮಾಲೀಕರಿಂದ ಹೊಸ ನಿಯಮ ಜಾರಿ!
ತಿಗಣೆಯ ಜೊಲ್ಲಿಗೆ ನಮ್ಮ ದೇಹದಲ್ಲಿರುವ ಹಿಸ್ಟಮೈನ್ ಎಂಬ ಅಂಶ ನೀಡುವ ಪ್ರತಿಕ್ರಿಯೆ ತುರಿಕೆಗೆ ಕಾರಣವಾಗುತ್ತದೆ
ಈ ತುರಿಕೆಯನ್ನು ನಿವಾರಿಸಲು corticosteroids ಮತ್ತು ಆಂಟಿ ಹಿಸ್ಟಮೈನ್ಗಳಾದ ಬೆನಾಡ್ರಿಲ್ ಔಷಧಿಗಳು ಸೂಕ್ತ ಆಯ್ಕೆಯಾದರೂ, ಇವು ಕೆಲ ಅಡ್ಡ ಪರಿಣಾಮ ಬೀರಬಹುದು
ಆದರೆ ಕೆಲ ನೈಸರ್ಗಿಕ ಮನೆಮದ್ದನ್ನು ಬಳಸುವ ಮೂಲಕ ತಿಗಣೆ ಕಡಿತದ ಉರಿಯಿಂದ ಮುಕ್ತಿ ಪಡೆಯಬಹುದು. ಅವು ಯಾವುವು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ
ಬಾಳೆಹಣ್ಣಿನ ಸಿಪ್ಪೆ: ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ತಿಗಣೆ ಕಚ್ಚಿದ ಭಾಗಕ್ಕೆ ಚೆನ್ನಾಗಿ ಉಜ್ಜಿ. ಇದರಿಂದ ತಕ್ಷಣವೇ ತುರಿಕೆ ಸಮಸ್ಯೆಯಿಂದ ಮುಕ್ತ ಪಡೆಯುತ್ತೀರಿ
ನಿಂಬೆರಸ: ಲಿಂಬೆಯಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ನಿವಾರಕ ಗುಣಗಳನ್ನು ಹೊಂದಿದ್ದು, ಚರ್ಮದ ಉರಿ ಮತ್ತು ತುರಿಕೆಯನ್ನು ನಿವಾರಿಸುವ ಸಾಮಾರ್ಥ್ಯವನ್ನು ಹೊಂದಿದೆ
ಅಲೋವೆರಾ ಜೆಲ್: ಸಾಮಾನ್ಯವಾಗಿ ತ್ವಚೆಯ ಆರೈಕೆಗೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಅಲೋವೆರಾ ಜೆಲ್ ಬಳಸಲಾಗುತ್ತದೆ
ಅಡುಗೆಸೋಡಾ: ತಿಗಣೆ ಕಡಿತಕ್ಕೆ ಅತ್ಯುತ್ತಮ ಮನೆಮದ್ದಾಗಿ ಅಡುಗೆ ಸೋಡಾವನ್ನು ಬಳಸಬಹುದು
ಇದಕ್ಕಾಗಿ ಸ್ವಲ್ಪ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ರೀತಿ ಮಾಡಿಕೊಂಡು ತಿಗಣೆ ಕಡಿದ ಭಾಗಕ್ಕೆ ಸವರಿ
ಅತಿಯಾದ ಸಕ್ಕರೆ ಸೇವನೆಯು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತೆ?