ನಟಿ ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ಧಾರ್ಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗುಟ್ಟಾಗಿ ಹಸೆಮಣೆ ಏರಿದ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದೆ.

ಅದಿತಿ ರಾವ್ ಹೈದರಿ ಹಾಗೂ ನಟ ಸಿದ್ಧಾರ್ಥ್ ಇಬ್ಬರಿಗೂ ಇದು 2ನೇ ಮದುವೆ ಆಗಿದೆ.

400 ವರ್ಷಗಳ ಹಳೆಯ ವನಪರ್ತಿಯ ದೇವಸ್ಥಾನದಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ಸಪ್ತಪದಿ ತುಳಿದಿದ್ದಾರೆ.

ನವ ಜೋಡಿ ರೊಮ್ಯಾಂಟಿಕ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಮಾರ್ಚ್ ತಿಂಗಳಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು,

ಇಬ್ಬರ ಮದುವೆ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಿದ್ಧಾರ್ಥ್ , ಅದಿತಿ ಕಲ್ಯಾಣ ನಡೆದಿದೆ.

ಮದುವೆಯಲ್ಲಿ ಅದಿತಿ ಗೋಲ್ಡ್ ಕಲರ್ ಲೆಹಂಗಾ ಧರಿಸಿದ್ದು, ಸಿಂಪಲ್ ಆಗಿ ರೆಡಿಯಾಗಿದ್ದಾರೆ.

ನಟ ಸಿದ್ಧಾರ್ಥ್ ವೈಟ್ ಕಲರ್ ಶರ್ಟ್ ಹಾಗೂ ಪಂಚೆಯಲ್ಲಿ ಮಿಂಚುತ್ತಿದ್ದಾರೆ.

ಇಬ್ಬರಿಗೂ ಇದು ಎರಡನೇ ಮದುವೆ ಆಗಿದೆ. ಅದಿತಿ ರಾವ್ ಹೈದರಿ ಅವರಿಗೆ ಮದುವೆ ಆಗಿ ಡಿವೋರ್ಸ್ ಆಗಿದೆ.