ಮೈಸೂರು ಮೃಗಾಲಯಕ್ಕೆ ತೆರಳುವವರು ಈಗ ವಾಟ್ಸಾಪ್‌ನಲ್ಲಿಯೇ ಟಿಕೆಟ್ ಪಡೆಯಬಹುದಾಗಿದೆ
ಮೃಗಾಲಯ ಪ್ರವೇಶದ ಟಿಕೆಟ್ ಪಡೆಯಲು ಹೀಗೊಂದು ಹೊಸ ಆಯ್ಕೆ ಜನರಿಗೂ ಬಹಳಷ್ಟು ಈಸಿ ಎನಿಸಿಕೊಂಡಿದೆ
ನಿಮ್ಮ ಮೊಬೈಲ್ ನಲ್ಲಿ ನೀವು ಬಳಸುವ ವಾಟ್ಸಾಪ್ ನಿಂದ ಜಸ್ಟ್ “ಹಾಯ್” ಅಂತಾ ಮೆಸೇಜ್ ಮಾಡಿದ್ರೆ ಸಾಕು ಮುಂದೆ ಅದೇ ನಿಮಗೆ ಟಿಕೆಟ್ ನೀಡುತ್ತೆ
ಕ್ಯೂ ನಿಲ್ಲಬೇಕಾದ ಅಗತ್ಯನೂ ಇಲ್ಲ, ಚಿಲ್ಲರೆ ಇಲ್ಲ ಅನ್ನೋ ಟೆನ್ಶನ್ನೂ ಇಲ್ಲ
ಅಷ್ಟಕ್ಕೆ ನೀವು ಮಾಡಬೇಕಿರುವುದು ಇಷ್ಟೇ ನೋಡಿ. ಝೂಗೆ ತೆರಳುತ್ತಿದ್ದಂತೆ ಅಲ್ಲಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಸಿಗುತ್ತದೆ
ಅಲ್ಲಿರುವ 9686668818 ಮೊಬೈಲ್ ನಂಬರ್ ಇದ್ದು ಇದಕ್ಕೆ ನಿಮ್ಮ ವಾಟ್ಸಾಪ್‌ನಿಂದ ಹಾಯ್ ಎಂದು ಸಂದೇಶವನ್ನು ಕಳುಹಿಸಿದರೆ, ಒಂದಷ್ಟು ನಿಮ್ಮ ಮಾಹಿತಿಯನ್ನು ಕೇಳುತ್ತದೆ
ಈ ಮಾಹಿತಿಗಳನ್ನು ನೀವು ನೀಡಿದ ನಂತರ ಪೇಮೆಂಟ್ ಕೇಳುತ್ತದೆ
ನೀವು ಹಣವನ್ನು ಪಾವತಿ ಮಾಡಿದರೆ ನಿಮಗೆ ಟಿಕೆಟ್ ನಿಮ್ಮ ವಾಟ್ಸಾಪ್‌ಗೆ ಬರುತ್ತದೆ. ಯಾವುದೇ ಲೈನ್‌ನಲ್ಲಿ ನಿಲ್ಲದೇ ನಿಮ್ಮ ಮೊಬೈಲ್ ಮೂಲಕವೇ ಮೃಗಾಲಯದ ಟಿಕೆಟ್ ಅನ್ನು ಪಡೆಯಬಹುದು
ಇನ್ನು ಆಫ್‌ಲೈನ್ ಹಾಗೂ ಆನ್‌ಲೈನ್ ಎರಡರಲ್ಲೂ ಒಂದೇ ದರವನ್ನು ನಿಗದಿ ಮಾಡಿದ್ದು ವಯಸ್ಕರಿಗೆ 100 ರೂಪಾಯಿ ಹಾಗೂ ಮಕ್ಕಳಿಗೆ 50 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ
ಚಿತ್ರದುರ್ಗದಿಂದ ದಾವಣಗೆರೆಗೆ 72 ಕಿಮೀ ಷಟ್ಪಥ ಹೆದ್ದಾರಿ