ಮಕ್ಕಳನ್ನು ಇಲ್ಲಿಗೆ ಕರ್ಕೊಂಡು ಬನ್ನಿ! ಫುಲ್‌ ಖುಷ್‌ ಆಗ್ತಾರೆ

ಒಂದಲ್ಲಾ ಎರಡಲ್ಲಾ, ನೂರಕ್ಕೂ ಅಧಿಕ ಪಾರಿವಾಳಗಳು

ಆರಾಮಾಗಿ ತಮ್ಮಷ್ಟಕ್ಕೆ ತಾವು ಕಾಳುಗಳನ್ನ ತಿನ್ನುತ್ತಾ, ಸ್ವಚ್ಛಂದವಾಗಿ ಆಗಸದಲ್ಲಿ ಹಾರಾಡುತ್ತಾ, ಮತ್ತದೇ ಜಾಗಕ್ಕೆ ಬಂದು ಸೇರುವ ಈ ಪಾರಿವಾಳಗಳು ಕಂಡುಬಂದಿದ್ದು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಹೈಗ್ರೌಂಡ್ಸ್ ಸಂಚಾರ ಠಾಣೆಯ ಬಳಿ

ದಶಕಗಳಿಂದಲೂ ಇಲ್ಲಿ ಪಾರಿವಾಳಗಳು ಈ ಸ್ಥಳವನ್ನ ತಮ್ಮ ಮನೆಯಂತೆ ಮಾಡಿಕೊಂಡಿದ್ದು, ಮುಂಜಾನೆಯಿಂದ ಮುಸ್ಸಂಜೆಯವರೆಗೂ ಇಲ್ಲಿಯೇ ತಿಂದುಂಡು ಹಾರಾಡಿಕೊಂಡಿರುತ್ತವೆ

ರಸ್ತೆಯಲ್ಲಿ ಸಾಗುವ ವಾಹನ ಚಾಲಕರು, ಬೈಕ್ ಸವಾರರು, ಸ್ಥಳೀಯ ವ್ಯಾಪಾರಿಗಳು ಹಾಗೂ ಕೆಲ ವೃದ್ಧರು–ಮಕ್ಕಳಲ್ಲಿ ನಿತ್ಯವೂ ಇಲ್ಲಿನ ಈ ಪಾರಿವಾಳಗಳಿಗೆ ಆಹಾರ ಹಾಕುವವರಿದ್ದಾರೆ

ಕುಡಿಯಲು ನೀರು ಕೂಡ ಇರಿಸುವುದರಿಂದ ಪಾರಿವಾಳಗಳು ಇದೇ ಸ್ಥಳದಲ್ಲಿ ನಿತ್ಯವೂ ಕೂರುತ್ತವೆ

ಪಕ್ಕದಲ್ಲೇ ಸಾವಿರಾರು ವಾಹನಗಳು ಓಡಾಡಿದರೂ, ಸಮೀಪದಲ್ಲೇ ಪೊಲೀಸ್ ಠಾಣೆ ಇದ್ದರೂ ಈ ಪಾರಿವಾಳಗಳಿಗೆ ಮಾತ್ರ ಯಾರ ಭಯವೂ ಇಲ್ಲ

ನೀವೇನಾದ್ರು ಹೈಗ್ರೌಂಡ್ಸ್ ಸಂಚಾರ ಠಾಣೆ ರಸ್ತೆಯಲ್ಲಿ ತಿರ್ಗಾಡೋರಾಗಿದ್ರೆ, ಒಮ್ಮೆ ಈ ಪಾರಿವಾಳಗಳ ಗುಂಪನ್ನು ಮಾತಾಡ್ಸೋಕೆ ಟ್ರೈ ಮಾಡಿ 

ಈ ಪಾರಿವಾಳಗಳ ಗುಂಯ್ ಗುಡೋ ಸದ್ದು ಬೆಂಗಳೂರಿನ ಟ್ರಾಫಿಕ್ ಜಂಜಾಟದ ನಡುವೆ ಕಿವಿಗೆ- ಮನಸ್ಸಿಗೆ ಕೊಂಚ ಮುದ ನೀಡಬಲ್ಲದು

ಈ ಬ್ಯುಸಿನೆಸ್‌ಗೆ ಇಷ್ಟೊಂದ್‌ ಡಿಮ್ಯಾಂಡಾ? ಹಪ್ಪಳ ಮಾಡಿಯೇ ಸಕ್ಸಸ್‌ ಆದ ಕಾಸರಗೋಡಿನ ಯುವಕ