ಆಚಾರ್ಯ ಚಾಣಕ್ಯರ ಪ್ರಕಾರ ಜೀವನದಲ್ಲಿ ನಾವು ಕೆಲವು ಜನರಿಂದ ದೂರ ಇದ್ದರೆ ಬಹಳ ಒಳ್ಳೆಯದು. ಏಕೆಂದರೆ ಕೆಲ ಕೆಟ್ಟ ಗುಣಗಳನ್ನ ಹೊಂದಿರುವ ಜನರು ನಿಮ್ಮ ಜೀವನವನ್ನ ಸಹ ನರಕವಾಗಿಸುತ್ತಾರೆ

ಹಾಗಾದ್ರೆ ಯಾವ ರೀತಿಯ ಜನರಿಂದ ದೂರ ಇರಬೇಕು ಎಂಬುದು ಇಲ್ಲಿದೆ

ಮೌರ್ಯರ ಆಳ್ವಿಕೆಯ ಕಾಲದಲ್ಲಿ ಚಂದ್ರ ಗುಪ್ರನ ಪರಮಾಪ್ತರಾಗಿದ್ದ ಆಚಾರ್ಯ ಚಾಣಕ್ಯ ಎಲ್ಲರಿಗೂ ಗೊತ್ತಿರುವವರೇ. ಇವರು ರಾಜನೀತಿಜ್ಞ, ಅರ್ಥಶಾಸ್ತ್ರಜ್ಞ, ಭಾರತೀಯ ತತ್ವಜ್ಞಾನಿ, ಕೌಟಿಲ್ಯ ಎಂದೆಲ್ಲಾ ಪ್ರಸಿದ್ಧರಾಗಿದ್ದಾರೆ

ಅಲ್ಲದೇ, ನಮ್ಮ ಜೀವನಕ್ಕೆ ಬೇಕಾದ ಅನೇಕ ತತ್ವಗಳನ್ನ ಸಹ ನೀಡಿದ್ದಾರೆ

ಭಾರತೀಯ ಜ್ಞಾನ ಪರಂಪರೆಯಲ್ಲಿ ಆಚಾರ್ಯ ಚಾಣಕ್ಯನಿಗೆ ಬಹಳ: ಪ್ರಮುಖವಾದ ಸ್ಥಾನವಿದೆ. ಇವರು ನೀಡಿರುವ ಸಲಹೆಗಳನ್ನ ನಾವು ಈಗಲೂ ಅನುಸಾರ ಮಾಡುತ್ತೇವೆ. ಏಕೆಂದರೆ ಅವರ ನೀತಿಗಳು ಇಂದಿನ ಕಾಲಕ್ಕೂ ಸೂಕ್ತವಾಗಿದೆ

ಈ ಜ್ಞಾನದ ಆಧಾರದ ಮೇಲೆ, ಅವರು ನಮ್ಮ ಜೀವನ ಹೇಗಿರಬೇಕು, ಯಾರ ಜೊತೆ ಸ್ನೇಹ ಮಾಡಬೇಕು ಎಂಬುದರ ಬಗ್ಗೆ ಸಹ ತಿಳಿಸಿದ್ದಾರೆ. ಅವರ ಪ್ರಕಾರ ನಾವು ಕೆಲವು ಗುಣಗಳನ್ನ ಹೊಂದಿರುವ ಜನರಿಂದ ದೂರ ಇರಬೇಕು

ಮೂರ್ಖರಿಗೆ ಎಂದಿಗೂ ನಾವು ಬುದ್ದಿ ಹೇಳಲು ಹೋಗಬಾರದು, ಹಾಗೆಯೇ, ಅವರ ಜೊತೆ ನಾವು ಸ್ನೇಹವನ್ನ ಸಹ ಬೆಳೆಸಿಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯರು

ಏಕೆಂದರೆ ಅವರು ಎಂದಿಗೂ ಯಾರ ಮಾತನ್ನೂ ಕೇಳುವುದಿಲ್ಲ, ಜೊತೆಗೆ ನಿಮಗೆ ತೊಂದರೆಯನ್ನ ಸಹ ಮಾಡುತ್ತಾರೆ

ಇನ್ನು ಸ್ವಾರ್ಥಿ ಮಹಿಳೆಯರಿಂದ ದೂರ ಇರಬೇಕು ಎನ್ನಲಾಗುತ್ತದೆ. ಯಾವ ಮಹಿಳೆ ತನ್ನ ಕುಟುಂಬದ ಬಗ್ಗೆ ಯೋಚನೆ ಮಾಡುವುದಿಲ್ಲವೋ ಹಾಗೂ ಕೇವಲ ತನ್ನ ಬಗ್ಗೆ ಯೋಚನೆ ಮಾಡುತ್ತಾಳೆಯೊ, ಅವರಿಂದ ನೀವು ದೂರ ಇದ್ದರೆ ಬಹಳ ಉತ್ತಮ

ಕೇವಲ ಹಣದ ಬಗ್ಗೆ ಯೋಚನೆ ಮಾಡುವ ಜನರು ಅಥವಾ ಪದೇ ಪದೇ ಆರ್ಥಿಕ ಸಮಸ್ಯೆಗೆ ಸಿಲುಕುವ ಜನರಿಂದ ದೂರ ಇದ್ದರೆ ಬಹಳ ಉತ್ತಮ. ಅವರು ಮುಂದಿನ ದಿನಗಳಲ್ಲಿ ನಿಮ್ಮನ್ನ ಸಹ ಆರ್ಥಿಕ ಸಮಸ್ಯೆಗೆ ಸಿಲುಕಿಸಬಹುದು