ಮೊದಲದೇ ಡಿವೋರ್ಸ್ಗಾಗಿ ಅರ್ಜಿ ಸಲ್ಲಿಸಿದ್ದ ಚಂದನ್ ಗೌಡ ಹಾಗೂ ನಿವೇದಿತಾ ಗೌಡ ಇಂದು ಮತ್ತೆ ಕೋರ್ಟ್ಗೆ ಹಾಜರಾಗಿದ್ದಾರೆ.
ನಿವೇದಿತಾ - ಚಂದನ್ ನಿಯಮಗಳ ಪ್ರಕಾರ ವಿಚಾರಣೆಗೆ ಹಾಜರಾಗಿದ್ದಾರೆ.
ಅಗ್ರಿಮೆಂಟ್ ಆಧರಿಸಿ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಇಬ್ಬರೂ ಅಗ್ರಿಮೆಂಟ್ ಪ್ರಕಾರ ಕೋರ್ಟ್ ಮುಂದೆ ಹೇಳಿಕೆ ನೀಡಿದ್ರೆ ವಿಚ್ಚೇದನ ಮಂಜೂರು
ಇವರಿಬ್ಬರೂ ಸಹ ಒಪ್ಪಿಕೊಂಡೇ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. 13b of family court act ಅಡಿ ಒಪ್ಪಿಗೆ ನೀಡಿದ್ದಾರೆ.
ಯಾರೊಬ್ಬರ ಮೇಲೂ ಯಾವುದೇ ಆರೋಪ ಮಾಡದೇ ಒಪ್ಪಿಗೆ ಸೂಚಿಸಿದ್ದಾರೆ. ಅವರಿಬ್ಬರ ನಡುವೆ ಯಾವುದೇ ಗಲಾಟೆ ಆಗಿಲ್ಲ ಅನ್ನುವ ರೀತಿಯಲ್ಲಿ ಇಬ್ಬರೂ ಸಹ ಕೈ ಕೈ ಹಿಡಿದುಕೊಂಡೇ ಬಂದಿದ್ದಾರೆ.
ಕೌಟುಂಬಿಕ ಕೋರ್ಟ್ನಲ್ಲಿ ಇರಲಿದೆ ಮಿಡಿಯೇಷನ್ ಸೆಂಟರ್ ನಲ್ಲಿ ಸಂದಾನ ಮಾಡುವ ಕೆಲಸ ಮಾಡಲಾಗಿದೆ. ಆದರೆ ಇವರಿಬ್ಬರು ಸಂದಾನಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಯಾರೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ಆ ದಂಪತಿಗಳಿಗೆ ಕೋರ್ಟ್ ನಲ್ಲಿ ಕೂರುಸಿ ಮಿಡಿಯೇಟರ್ (ಸಂದಾನಕಾರರು) ಮಾತನಾಡಿಸುತ್ತಾರೆ.
ಪರಸ್ಪರ ಒಂದಾಗಿ ಬಾಳಿ ಎಂದು ಸಲಹೆ ನೀಡುತ್ತಾರೆ. ಇಬ್ಬರು ಒಪ್ಪದೇ ಇದ್ದಂತಹ ಸಂದರ್ಭದಲ್ಲಿ ಸ್ವಯಿಚ್ಚೆಯಂತೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾರೆ.
ಇದೀಗ ಮೀಡಿಯೇಶನ್ ಸುತ್ತು ಮುಗಿಸಿರುವ ದಂಪತಿಗಳು, ಸಧ್ಯ ನ್ಯಾಯಾಧೀಶರ ಮುಂದೆ ಹಾಜರ್ ಆಗಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ನ್ಯಾಯಾಧೀಶರ ಮುಂದೆ ಹಾಜರ್ ಆಗಿದ್ದಾರೆ.