Chandrayaan-3ರ ಯಶಸ್ವಿ ಲ್ಯಾಂಡಿಂಗ್‌ಗೆ ದೇಶದ ವಿವಿಧೆಡೆಗಳಲ್ಲಿ ಪೂಜೆ ಪುನಸ್ಕಾರ!

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲು ಕೌಂಟ್‌ಡೌನ್ ಶುರುವಾಗಿದೆ

ಇನ್ನು ಕೆಲವೇ ಗಂಟೆಗಳಲ್ಲಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಪರಿಪೂರ್ಣಗೊಳ್ಳಲಿದೆ

ದೇಶಾದ್ಯಂತ ಪ್ರತಿಯೊಬ್ಬ ಭಾರತೀಯರೂ ಈ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸುತ್ತಿದ್ದಾರೆ

ಇದರ ಜೊತೆ ಜೊತೆಗೆ ದೇಶದ ಮೂಲೆ ಮೂಲೆಯಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ, ಪೂಜೆ ಪುನಸ್ಕಾರಗಳ ಮೂಲಕವೂ ಚಂದ್ರಯಾನ-3ರ ಯಶಸ್ಸಿಗೆ ಪ್ರಾರ್ಥಿಸಲಾಗುತ್ತಿದ್ದು, ಮಂದಿರ, ಮಸೀದಿ, ಚರ್ಚ್‌ ಎನ್ನದೆ ಸರ್ವಧರ್ಮೀಯರೂ ಶುಭ ಹಾರೈಸುತ್ತಿದ್ದಾರೆ

ಚಂದ್ರಯಾನದ ಯಶಸ್ವಿ ಲ್ಯಾಂಡಿಂಗ್‌ಗಾಗಿ ನ್ಯೂಜೆರ್ಸಿಯ ಮನ್ರೋದಲ್ಲಿರುವ ಓಂ ಶ್ರೀ ಸಾಯಿ ಬಾಲಾಜಿ ದೇವಸ್ಥಾನ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಅನಿವಾಸಿ ಭಾರತೀಯರು ಪ್ರಾರ್ಥನೆಯನ್ನು ಮಾಡಿದ್ದಾರೆ

ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಸಿಗಂದರು ಚೌಡೇಶ್ವರಿ ದೇವಸ್ಥಾನದಲ್ಲಿ ಕೂಡ ಚಂದ್ರಯಾನದ ಯಶಸ್ಸಿಗಾಗಿ ಬೆಳಿಗ್ಗೆ 09.30ರಿಂದ ದುರ್ಗಾ ಸಪ್ತಶತಿ ಪಾರಾಯಣ, ಚಂಡಿಕಾ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ

ಸಿಗಂದರು ಚೌಡೇಶ್ವರಿ ದೇವಸ್ಥಾನದಲ್ಲಿ ಕೂಡ ಚಂದ್ರಯಾನದ ಯಶಸ್ಸಿಗಾಗಿ ಬೆಳಿಗ್ಗೆ 09.30ರಿಂದ ದುರ್ಗಾ ಸಪ್ತಶತಿ ಪಾರಾಯಣ, ಚಂಡಿಕಾ ಹೋಮ ನಡೆಯಿತು

ಚಂದ್ರಯಾನ-3 ತಂಡದ ಭಾಗವಾಗಿರುವ ಇಸ್ರೋ ವಿಜ್ಞಾನಿ ಸುಧಾಂಶು ಕುಮಾರ್ ಅವರ ಪೋಷಕರು ಬಿಹಾರದ ಗಯಾದಲ್ಲಿರುವ ತಮ್ಮ ಮನೆಯಲ್ಲಿ ಭಾರತದ ಮೂರನೇ ಚಂದ್ರಯಾನದ ಯಶಸ್ವಿ ಲ್ಯಾಂಡಿಂಗ್‌ಗಾಗಿ ಪ್ರಾರ್ಥನೆ ಸಲ್ಲಿಸಿದರು

ಇನ್ನು ಚಂದ್ರಯಾನ 3 ಯಶಸ್ವಿಗಾಗಿ ಒಂದು ಗಂಟೆಗಳ‌ ಕಾಲ ಸುದೀರ್ಘ ಪೂಜೆಯನ್ನು ಬೆಂಗಳೂರು ನಗರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ