ಕಾರವಾರ: ಸಾಮಾನ್ಯವಾಗಿ ಎಲ್ಲೆಡೆ ದೇವರ ಹೆಸರಿನಲ್ಲಿ ಜಾತ್ರೆ-ಉತ್ಸವ  ನಡೆಯುವುದು ಸಾಮಾನ್ಯ

ಅಲ್ಲಿ ದೇವರಿಗೆ ಹರಕೆ ಹೂ-ಕಾಯಿ ಸಲ್ಲಿಸುತ್ತಾರೆ. ಉಳಿದಂತೆ ಆಟಿಕೆ ಸಾಮಗ್ರಿ ಹಾಗೂ ಸಿಹಿತಿನಿಸುಗಳ ಅಂಗಡಿ ಮಳಿಗೆಗಳು, 

ನಾಟಕ ಪ್ರದರ್ಶನ ನಡೆಯುತ್ತವೆ. ಆದರೆ, ಕಾರವಾರದ ಈ ಜಾತ್ರೆ ವಿಭಿನ್ನ ಹಾಗೂ ವಿಶೇಷವಾಗಿ ನಡೆಯುತ್ತದೆ. ಏನಿದರ ವಿಶೇಷ, ಈ ವರದಿ ನೋಡಿ

ಕಾರವಾರ ನಗರದ ಮಾರುತಿಗಲ್ಲಿಯ ಶ್ರೀಮಾರುತಿ ದೇವರ ಜಾತ್ರೆ ಉಳಿದೆಲ್ಲ ಜಾತ್ರೆಗಿಂತ ವಿಭಿನ್ನವಾಗಿದ್ದು, ಅದ್ಧೂರಿಯಾಗಿ ನಡೆಯಿತು

 ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ನಡೆದ ರಂಗೋಲಿ ಸ್ಪರ್ಧೆ ಹಾಗೂ ಪ್ರದರ್ಶನ ಜನಮನ ಸೆಳೆಯಿತು. ಈ ಜಾತ್ರೆಯು ‘ರಂಗೋಲಿಯ ಜಾತ್ರೆ’ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ

ದೇವರ ಪೂಜೆ ವಿಧಿವಿಧಾನಗಳು ಉಳಿದ ಜಾತ್ರೆಗಳಂತಿದ್ದರೂ ಇಲ್ಲಿ ರಂಗೋಲಿಗಳದ್ದೇ ಕಾರುಬಾರು

ಹಾಗಾಗಿ ಚಿಕ್ಕಮಕ್ಕಳಾದಿಯಿಂದ ಹಿಡಿದು ದೊಡ್ಡವರು ಇದನ್ನು ರಂಗೋಲಿ ಜಾತ್ರೆ ಎಂದೇ ಕರೆಯುತ್ತಾರೆ

ಈ ರಂಗೋಲಿಯ ಜಾತ್ರೆ ಇಂದು ನಿನ್ನೆಯದಲ್ಲ. ನಾಲ್ಕು ದಶಕಗಳ ಇತಿಹಾಸವಿದೆ. ವರ್ಷದಿಂದ ವರ್ಷಕ್ಕೆ ಇದು ತನ್ನ ಪ್ರಚಾರವನ್ನು ಹೆಚ್ಚಿಸಿಕೊಳ್ಳುತ್ತಿದೆ

ಸಂಕ್ರಾಂತಿ ಹಬ್ಬ ಯಾವಾಗ ಎನ್ನುವ ಗೊಂದಲ ಇದ್ಯಾ? ಇಲ್ಲಿದೆ ಪಕ್ಕಾ ಮಾಹಿತಿ

ಜಾತ್ರೆಯ ಮೊದಲ ದಿನ ವಿವಿಧ ಕಲಾವಿದರ ಕೈಯಲ್ಲಿ ಅರಳುವ ಹಲವು ರೀತಿಯ ವೈವಿಧ್ಯಮಯವಾದ ಕಲಾಕೃತಿಗಳ ವೀಕ್ಷಣೆಗೆ ಇಲ್ಲಿ ಜನರ ನೂಕು ನುಗ್ಗಲು ನಡೆಯುತ್ತದೆ

 ಈ ಬಾರಿ ನರೇಂದ್ರ ಮೋದಿ, ಅಮಿತ್ ಶಾ, ಸೀತಾರಾಮರ ರಂಗೋಲಿಗಳು, ರಾಮ ಮಂದಿರ ಪ್ರತಿಕೃತಿ ಗಮನ ಸೆಳೆಯಿತು

ರಾಮನಿಗೆ ಸಾಥ್ ನೀಡಿದ್ದ ಸುಗ್ರೀವನ ಬಗ್ಗೆ ನಿಮಗೆಷ್ಟು ಗೊತ್ತು? ಇಬ್ಬರ ಸ್ನೇಹದ ಕಥೆ ಇದು