ಚಾರ್ಮಾಡಿ ಘಾಟ್ ಭೂಲೋಕದ ಸ್ವರ್ಗ. ಪಶ್ಚಿಮ ಘಟ್ಟದ ರಮಣೀಯ ಸ್ಥಳ
ಇದನ್ನು ನೋಡಲೆಂದೆ ಸಾವಿರಾರು ಜನರು ಬರುತ್ತಾರೆ, ಆದ್ರೆ ಇಲ್ಲೊಂದು ದೈವವಿದೆ
ಆ ದೈವ ಇಡೀ ಚಾರ್ಮಾಡಿಯನ್ನು ಕಾಪಾಡುತ್ತೆ ಅನ್ನೋ ನಂಬಿಕೆ ಜನರಲ್ಲಿ ಇದೆ. ಅದುವೇ ಶ್ರೀಅಣ್ಣಪ್ಪ ಸ್ವಾಮಿ
ಅಣ್ಣಪ್ಪಸ್ವಾಮಿ ಅಂದಾಕ್ಷಣ ನಮ್ಗೆಲ್ಲಾ ಶ್ರೀಕ್ಷೇತ್ರ ಧರ್ಮಸ್ಥಳದ ನೆನಪಾಗುತ್ತದೆ
ಆದರೆ ಇಲ್ಲಿರೋದು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಅಲ್ಲ, ಚಾರ್ಮಾಡಿ ಘಾಟಿಯಲ್ಲಿರುವ ಘಾಟಿ ಅಣ್ಣಪ್ಪ ಸ್ವಾಮಿ ದೇವಾಲಯ
ಕಷ್ಟಕರ ಘಾಟಿನಲ್ಲಿ ಸಂಚರಿಸುವ ಜನರನ್ನು ರಕ್ಷಣೆ ಮಾಡಲೆಂದೇ ಈ ಅಣ್ಣಪ್ಪ ಸ್ವಾಮಿ ದೇವಸ್ಥಾನವಿದೆ
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಾಗುವಾಗ ಸೋಮನ ಕಾಡು ಮುಗಿದ ನಂತರದಲ್ಲಿ ಈ ಅಣ್ಣಪ್ಪ ದೇವಾಲಯವಿರುದರಿಂದ ಭಕ್ತಾದಿಗಳಿಗೆ ಇಲ್ಲಿಗೆ ಭೇಟಿ ನೀಡುತ್ತಾರೆ
ಮತ್ತು ಸಾಗುವ ಪ್ರತಿಯೊಬ್ಬ ಜನರು ಇಲ್ಲಿ ತಮ್ಮ ವಾಹನ ನಿಲ್ಲಿಸಿ ಪ್ರಾರ್ಥನೆ ಮಾಡಿಕೊಂಡು ಹೋಗುತ್ತಾರೆ
ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಸಾಧಿಸುವ ಈ ಚಾರ್ಮಾಡಿಯಲ್ಲಿ ಘಾಟಿ ಅಣ್ಣಪ್ಪ ನೆಲೆಸಿದ್ದಾನೆ ಎಂಬುದು ಜನರು ಮತ್ತು ಭಕ್ತರ ನಂಬಿಕೆ
ಇಲ್ಲಿ ಈ ದುರ್ಗಮ ಘಾಟಿಯಲ್ಲಿ ಸಾಗುವ ಜನರಿಗೆ ಯಾವುದೇ ತೊಂದ್ರೆ ಆಗಬಾರದು, ಪ್ರಯಾಣ ಸುಖಕರವಾಗಿ ಆಗಬೇಕು, ಯಾವುದೇ ಅಪಘಾತಗಳು ನಡೆಯಬಾರದು ಎಂದು ದೇವರೇ ಬಂದು ಇಲ್ಲಿ ನೆಲೆಸಿದ್ದಾರೆ ಎಂಬುದು ಇಲ್ಲಿ ಬರುವ ಭಕ್ತರ ನಂಬಿಕೆ
Yoga Day: ಈಜಿನ ಜೊತೆಗೆ 12 ಯೋಗಾಸನ ಪ್ರದರ್ಶಿಸುತ್ತಾರೆ ಚಿಕ್ಕಮಗಳೂರಿನ ಈ ವಕೀಲ!