ಚೊಚ್ಚಲ ಸ್ಪರ್ಧೆಯಲ್ಲೇ ಕಿರೀಟ ಮುಡಿಗೇರಿಸಿಕೊಂಡ ಮಲೆನಾಡಿನ ಚೆಲುವೆ!

ಇವರು ಚಿಕ್ಕಮಗಳೂರಿನ ಎಐಟಿ ಯಲ್ಲಿ ಪ್ರಥಮ ಬಿಬಿಎ ವಿದ್ಯಾರ್ಥಿನಿ

ಚಿಕ್ಕಮಗಳೂರಿನ ಶಿವಂ ಸ್ಕೂಲ್ ಆಫ್ ಡ್ಯಾನ್ಸ್‌ನ ಶರತ್ ಅವರಿಂದ ತರಬೇತಿಯನ್ನು , ಚಿಕ್ಕಮಗಳೂರಿನ ದ ಸ್ಕಲ್ಟ್ ಫಿಟ್ನೆಸ್‌ನ ಅಲಿ ಹಸೀಬ್ ಅವರಿಂದ ಫಿಟ್ನೆಸ್ ತರಬೇತಿ ಪಡೆದವರು

ಇವರು ಇತ್ತೀಚೆಗೆ ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ಆಗಸ್ಟ್ 29ರಿಂದ 3 ದಿನಗಳ ಕಾಲ ನಡೆದ ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಫ್ಯಾಶನ್‌ ಶೋ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಕರ್ನಾಟಕದಲ್ಲಿ‌ ರನ್ನರ್ ಅಪ್ ಆಗಿದ್ದಾರೆ

ಡಿಸಲ್ ತೌರೋ ಮೊದಲ ಬಾರಿಗೆ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ

ಈವರೆಗೆ ಎಲ್ಲಿಯೂ ಫ್ಯಾಶನ್ ಲೋಕದತ್ತ ಬಾರದ ಅವರು ನೇರವಾಗಿ ಬೆಂಗಳೂರಿ‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ

ಭಾಗಿಯಾದ ಮೊದಲ ಸ್ಪರ್ಧೆಯಲ್ಲಿಯೆ ರನ್ನರ್ ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಬೆಸ್ಟ್ ವಾಕ್ ಅವಾರ್ಡ್, ಬೆಸ್ಟ್ ಟ್ಯಾಲೆಂಟ್ ಅವಾರ್ಡ್‌ನ್ನು ಪಡೆದುಕೊಂಡಿದ್ದಾರೆ

ಡಿಸಲ್ ತೌರೋ ಅವರಿಗೆ ಫ್ಯಾಶನ್ ಲೋಕಕ್ಕೆ ಬರಲು ಕಾರಣವಾದದ್ದು ಅವರ ಅಮ್ಮ

ಡಿಸಲ್ ತೌರೋ ತಾಯಿ ಶಾಲೆಟ್ ತೌರೊ. ಮೂಲತ ಮಂಗಳೂರಿನ ಶಾಲೆಟ್ ತೌರೋ ವಿವಾಹವಾದ ಬಳಿಕ ಚಿಕ್ಕಮಗಳೂರಿಗೆ ತೆರಳಿದ್ದಾರೆ

ಅವರು ಬೆಂಗಳೂರಿನಲ್ಲಿ ನಡೆದ ಮಿಸೆಸ್ ಇಂಡಿಯಾ ಕರ್ನಾಟಕ 2023 ಕ್ಲಾಸಿಕ್ ನಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ಫಿಟ್ನೆಸ್ ಅವಾರ್ಡ್ ಕೂಡ ಪಡೆದಿದ್ದರು

ತನ್ನ ಮಗಳು ತನ್ನಂತೆ ಫ್ಯಾಶನ್ ಲೋಕಕ್ಕೆ ಬರಬೇಕೆಂದು ಅವರದು ಮಹದಾಸೆ.ಅದರಂತೆ ಮಂಗಳೂರಿನ ಪಾಥ್ ವೇ ಎಂಟರ್ ಪ್ರೈಸಸ್ ನ ದೀಪಕ್ ಗಂಗೂಲಿ ಅವರನ್ನು ಸಂಪರ್ಕಿಸಿ ತನ್ನ ಮಗಳಿಗೆ ಟ್ರೈನಿಂಗ್ ನೀಡಲು ತಿಳಿಸಿದ್ದಾರೆ

ದೀಪಕ್ ಗಂಗೂಲಿ ಟ್ರೈನಿಂಗ್ ನೀಡುವ ಜೊತೆಗೆ ಮಿಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ಡಿಸಲ್ ತೌರೋಳನ್ನು ಭಾಗಿಯಾಗಲು ತಯಾರು ಮಾಡಿದ್ದಾರೆ

ಡಿಸಲ್ ತೌರೋ ಮೊದಲ ಸ್ಪರ್ಧೆಯಲ್ಲಿಯೆ ರನ್ನರ್ ಅಪ್ ಆಗಿ ಭರವಸೆ ಮೂಡಿಸಿದ್ದಾರೆ

ಕನ್ನಡ ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್‌! ಹೋಸ್ಟ್‌ ಕೂಡ ಕನ್‌ಫರ್ಮ್‌!