ಮಳೆಗಾಗಿ ದೇವರ ಮೊರೆ ಹೋದ ಮಲೆನಾಡಿನ ಮಂದಿ
ಈ ಬಸವೇಶ್ವರನ ಕೂಗಿದ್ರೆ ಮಳೆ ಗ್ಯಾರಂಟಿ!
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಗ್ರಾಮಸ್ಥರು ಸೇರಿಕೊಂಡು ಮಳೆಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಲೆನಾಡಿನಲ್ಲೂ ಬರಗಾಲ ಆವರಿಸಿಕೊಂಡಿದ್ದು ಜನರು ದೇವರ ಮೊರೆ ಹೋಗಿದ್ದಾರೆ.
ಮಳೆ ಸುರಿಸುವಂತೆ ರೈತಾಪಿ ವರ್ಗದ ಆರಾಧ್ಯ ದೈವಕ್ಕೆ ಪೂಜೆ ಸಲ್ಲಿಸಿದ್ದಾರೆ.
15 ವರ್ಷಗಳಲ್ಲಿಯೇ ಭೀಕರ ಬರಗಾಲಕ್ಕೆ ತುತ್ತಾಗಿದ್ರಿಂದ ಕಾಫಿನಾಡಿನ ಮಂದಿ ಶಾಸ್ತ್ರೋಕ್ತ ಪೂಜೆ ಮುಗಿಸಿದ್ದಾರೆ.
ಈ ದೇವರಿಗೆ ಕೈ ಮುಗಿದ್ರೆ ಮಳೆಯಾಗುತ್ತೆ ಅನ್ನೋ ನಂಬಿಕೆಯೂ ಇದೆ.
ಕಣಿವೆ ಬಸವೇಶ್ವರನಿಗೆ ಪೂಜೆ ಸಲ್ಲಿಸಿದರೆ ಮಳೆ ಆಗುತ್ತೆ ಅನ್ನೋದು ಈ ಗ್ರಾಮಸ್ಥರು ನಂಬಿಕೆ ಆಗಿದೆ.
ಆದ್ದರಿಂದ ಭಕ್ತರೆಲ್ಲ ಸೇರಿ ಪುರೋಹಿತರ ಮೂಲಕ ಪೂಜೆ ನೆರವೇರಿಸಿ ಪ್ರಾರ್ಥಿಸಿದ್ದಾರೆ.
ಹೀಗಾಗಿ ಗ್ರಾಮಸ್ಥರು ರೈತಾಪಿ ವರ್ಗದ ದೇವರ ಮೊರೆ ಹೋಗಿದ್ದಾರೆ.