ಕಲಬುರಗಿಯ ಚಿಂಚೋಳಿ ಪಟ್ಟಣದ ಡಾ. ವೀರೇಂದ್ರ ಪಾಟೀಲ್ ಶಾಲೆಯಲ್ಲಿ ಓದುತ್ತಿರುವ 4ನೇ ತರಗತಿಯ ಗುರುಪ್ರಸಾದ್, 5ನೇ ತರಗತಿಯ ಪ್ರಜ್ವಲ್ ಹಾಗೂ 7 ನೇ ತರಗತಿ ಬಾಲಕ ಪ್ರತೀಕ್ ಇಂತಹ ಅಪರೂಪದ ಸಾಧಕರು
ವಿಶೇಷ ಅಂದ್ರೆ ಈ ಮೂವರು ಒಂದೇ ಮನೆಯ ಕೂಡು ಕುಟುಂಬದ ಸದಸ್ಯರಾಗಿದ್ದು, ಇದರಲ್ಲಿ ಪ್ರಜ್ವಲ್ ಹಾಗೂ ಪ್ರತೀಕ್ ಸ್ವಂತ ಅಣ್ಣ ತಮ್ಮಂದಿರಾಗಿದ್ದಾರೆ
ಯಾವುದಾದರೂ ಕರೆನ್ಸಿ ನೋಟುಗಳನ್ನು ನೀಡಿದರೆ ಅದರ ಬೆಲೆ, ನೋಟ್ ನಲ್ಲಿರುವ ಮುದ್ರಿತವಾಗಿರುವ ಸೀರಿಯಲ್ ಸಂಖ್ಯೆಯನ್ನು ನಿಖರವಾಗಿ ಹೇಳಬಲ್ಲರು
ಜೊತೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಮೊಬೈಲ್ ಆಪರೇಟ್ ಮಾಡಬಲ್ಲ ಈ ಮಕ್ಕಳು, ಸೈಕ್ಲಿಂಗ್, ಕ್ಯಾರಂ ಆಟವನ್ನು ಯಾವುದೇ ಅಡೆತಡೆಯಿಲ್ಲದೇ ಆಡಬಲ್ಲರು
ಒಟ್ಟಿನಲ್ಲಿ ಏನಾದ್ರೂ ಸ್ಪೆಷಲ್ ಅನ್ನಬಹುದಾದ ವಿದ್ಯೆಯನ್ನು ಈ ಮೂವರು ಮಕ್ಕಳು ಕಲಿತು ಕರಗತ ಮಾಡಿಕೊಂಡಿರುವುದು ವಿಶೇಷವೇ ಸರಿ
ಮನುಷ್ಯ ಮನಸ್ಸು ಮಾಡಿದ್ರೆ ಎಂತಹ ಕಲೆಯನ್ನೂ ಕಲಿಯಬಲ್ಲ ಅನ್ನೋದಕ್ಕೆ ಈ ಮೂವರು ಮಕ್ಕಳು ಸಾಕ್ಷಿಯಾಗಿದ್ದಾರೆ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅದ್ಹೇಗೆ ನೋಡ್ತೀರಿ ಅಂತಾ ಕೇಳಿದ್ರೆ ಮೂರನೇ ಕಣ್ಣಿನಲ್ಲಿ ಅನ್ನೋ ಮೂಲಕ ಈ ಮಕ್ಕಳು ಅವರ ಮುಂದಿದ್ದವರನ್ನು ಬೇಸ್ತು ಬೀಳಿಸುವಂತೆ ಮಾಡುತ್ತಾರೆ