ಲೋಕಸಭೆಯ ಒಳಗೆ ಬಂಧಿಸಿದ ಇಬ್ಬರು ಯುವಕರಲ್ಲಿ ಓರ್ವ ಮೈಸೂರು ಮೂಲದ ಮನೋರಂಜನ್​ ಎಂದು ಗುರುತಿಸಲಾಗಿದೆ

ಸಂಸತ್​ ಲೈವ್​​ ದೃಶ್ಯಗಳನ್ನು ಟಿವಿಯಲ್ಲಿ ನೋಡಿದ ಮನೋರಂಜನ್ ತಂದೆ, ಈತ ತಮ್ಮ ಮಗನೇ ಎಂದು ಗುರುತಿಸಿದ್ದಾರೆ

ಈ ಬಗ್ಗೆ ನ್ಯೂಸ್​​18 ಕನ್ನಡದೊಂದಿಗೆ ಮಾತನಾಡಿದ ಮನೋರಂಜನ್ ತಂದೆ ದೇವರಾಜೇ ಗೌಡ, ಮನೋರಂಜನ್ ತಮ್ಮ ಮಗನೇ, ಆತ ಬೆಂಗಳೂರಿನಲ್ಲಿ‌ ಬಿಇ ಓದಿದ್ದ

ದೆಹಲಿ, ಬೆಂಗಳೂರು ಅಂತ ಓಡಾಡುತ್ತಿದ್ದ, ಆದರೆ ಆತ ಎಲ್ಲಿಗೆ ಹೋಗಿದ್ದಾನೆ ಅಂತ ಗೊತ್ತಿಲ್ಲ

ಲೋಕಸಭೆಯಲ್ಲಿ ಭದ್ರತಾ ವೈಫಲ್ಯ! ಪ್ರತಾಪ್ ಸಿಂಹರನ್ನ ವಿಚಾರಣೆ ಒಳಪಡಿಸಬೇಕು; ಸಿದ್ದರಾಮಯ್ಯ ಆಗ್ರಹ

2014 ರಲ್ಲಿ ಬಿಇ ಮುಗಿಸಿದ್ದ, ನಾನು ರೈತ. ಆತ ತುಂಬಾ ಚೆನ್ನಾಗಿ ಓದುತ್ತಿದ್ದ. ಜಮೀನಿಗೆ ಬಂದು ಆಳುಗಳ ಜತೆಯಲ್ಲಿ ಕೆಲಸ ಮಾಡುತ್ತಿದ್ದ

ಮಗ ಎಲ್ಲಿಗೆ, ಯಾಕೆ‌ ಹೋಗುತ್ತೀವಿ ಅಂತ ಹೇಳುತ್ತಿಲಿಲ್ಲ ಎಂದು ತಿಳಿಸಿದ್ದಾರೆ

ನನ್ನ ಮಗ ಈ ರೀತಿ ಮಾಡಿದ್ದರೆ ಅದು ಅಕ್ಷಮ್ಯ. ಸದನ ದೇಗುಲ ಇದ್ದಂತೆ, ನಾನು ಕೂಡ ಇದನ್ನು ಖಂಡಿಸುತ್ತೇನೆ

ಯಾಕಾಗಿ ಈ ರೀತಿ ಮಾಡಿದ್ದಾನೆ ಅಂತ ಗೊತ್ತಿಲ್ಲ. ಪ್ರಕರಣದಲ್ಲಿರುವ ಇತರರ ಬಗ್ಗೆಯೂ ನನಗೆ ಮಾಹಿತಿ ಇಲ್ಲ

Loksabha Securiry Breach: ದಾಳಿ ನಡೆಸಿದ ನಾಲ್ವರಲ್ಲಿ ಒಬ್ಬಾತ ಮೈಸೂರಿನ ಯುವಕ! ಆರೋಪಿ ಹಿನ್ನೆಲೆ ಏನು?

ಆದರೆ ಮಗ ಮಾತ್ರ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಅಷ್ಟು ಬಿಟ್ಟು ನನಗೆ ಏನೂ ಗೊತ್ತಿಲ್ಲ

ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೇರಿಸಲಿ ಎಂದು ದೇವರಾಜು ವಿವರಿಸಿದ್ದಾರೆ

ಮೂರು ದಿನಗಳ ಹಿಂದೆ ಮನೋರಂಜನ್ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ

 ಆದರೆ ತಮ್ಮ ಮಗನಿಗೆ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ

ಅಲ್ಲದೇ ಮನೋರಂಜನ್ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂದು ಬಯಸಿದ್ದ, 35 ವರ್ಷದ ಮನೋರಂಜನ್ ಬೆಂಗಳೂರಿನ ವಿವೇಕಾನಂದ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮುಗಿಸಿದ್ದು, ನಿರುದ್ಯೋಗಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ