ಮುತ್ತುಗಳನ್ನ ಎಲ್ಲಿ ತಯಾರಿಸಲಾಗುತ್ತೆ ಅಂತಾ ಕೇಳಿದ್ರೆ ಯಾರಾದ್ರೂ ನಕ್ಕಾರು. ಯಾಕೆಂದ್ರೆ ಮುತ್ತು ನೈಸರ್ಗಿಕವಾಗಿ ಬೆಳೆಯುತ್ತೆ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ

ಆದ್ರೆ ಇತ್ತೀಚೆಗೆ ಮುತ್ತುಗಳನ್ನು ಕೂಡಾ ಕೃತಕವಾಗಿ ಬೆಳೆಯುವ ವ್ಯವಸ್ಥೆಗಳಾಗಿವೆ. ಅಬ್ಬ! ಅದ್ಹೇಗೆ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ನಿವಾಸಿ ನವೀನ್ ಚಂದ್ರ ಅವರೇ ಈ ರೀತಿಯಾಗಿ ಮನೆಯಲ್ಲೇ ಮುತ್ತು ಬೆಳೆಯುವ ಮೂಲಕ ಸಕ್ಸಸ್ ಕಂಡಿದ್ದಾರೆ

ಕಾರ್ಯಕ್ರಮವೊಂದರಲ್ಲಿ ಮುತ್ತು ಬೆಳೆಯುವ ಬಗ್ಗೆ ಪಡೆದ ಮಾಹಿತಿಯಿಂದ ಉತ್ಸುಕರಾದ ನವೀನ್, ಬೆಂಗಳೂರಿನ ಜಿಕೆವಿಕೆ ಯಲ್ಲಿ ಮುತ್ತು ಕೃಷಿಯ ಕುರಿತು ತರಬೇತಿಯನ್ನು ಪಡೆದುಕೊಂಡು ಇದೀಗ ಮನೆಯಲ್ಲೇ ಮುತ್ತು ಬೆಳೆಯಲು ಆರಂಭಿಸಿದ್ದಾರೆ

ಕಳೆದ ಎರಡು ವರ್ಷಗಳಿಂದ ಮುತ್ತು ಬೆಳೆಯಲು ಆರಂಭಿಸಿರುವ ನವೀನ್ ಮುತ್ತು ಬೆಳೆಯಲ್ಲಿ ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ

ಕೊಡಗಿನಿಂದ ಕಪ್ಪು ಚಿಪ್ಪುಗಳನ್ನು ತಂದು ಮನೆಯಲ್ಲಿ ನಿರ್ಮಿಸಿರುವ ನೀರಿನ ಕೊಳದಲ್ಲಿ ಅವುಗಳನ್ನು ಸಾಕಲಾಗುತ್ತದೆ

1 ಚಿಪ್ಪು ಬೆಳೆಯಲು 10 ಲೀಟರ್ ನೀರಿನ ಅಗತ್ಯವಿದ್ದು, ನವೀನ್ 2 ಸಾವಿರ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕಿನಲ್ಲಿ ಚಿಪ್ಪುಗಳನ್ನು ಬೆಳೆಸುತ್ತಿದ್ದಾರೆ

ಚಿಪ್ಪುಗಳನ್ನು ತಂದು ಒಂದು ವಾರಗಳ ಕಾಲ ಪರಿಶೀಲನೆಗಾಗಿ ಬೇರೆ ಟ್ಯಾಂಕ್ ನಲ್ಲಿ ಹಾಕಲಾಗುತ್ತದೆ

ಬಳಿಕ ಸರ್ಜರಿ ಮೂಲಕ ತಮಗೆ ಬೇಕಾದ ಮಸಲ್ಸ್, ನ್ಯೂಕ್ಲೇ ಗಳನ್ನು ಚಿಪ್ಪಿನ ಒಳಗೆ ಸೇರಿಸಲಾಗುತ್ತೆ. ಬಳಿಕ ಅವುಗಳನ್ನು ದೊಡ್ಡ ಟ್ಯಾಂಕಿಗೆ ಹಾಕಲಾಗುತ್ತದೆ. ಟ್ಯಾಂಕಿಗೆ ಹಾಕುವ ಚಿಪ್ಪುಗಳನ್ನು ಹಾಕಿದ ದಿನಾಂಕವನ್ನು ನಮೂದಿಸಲಾಗುತ್ತದೆ

ಹೀಗೆ ಬೆಳೆದ ಮುತ್ತನ್ನು ಚಿಪ್ಪುವಿನಿಂದ ಬೇರ್ಪಡಿಸಲಾಗುತ್ತದೆ. ಮಣಿಯಾಕಾರದ ಮುತ್ತು, ದೇವರ ಕಲಾಕೃತಿಗಳು ಹೀಗೆ ವಿವಿಧ ರೀತಿಯ ಮುತ್ತುಗಳನ್ನು ಬೆಳೆಯಲಾಗುತ್ತದೆ