ಗೆಜ್ಜೆ ಬಿಚ್ಚಿದ ಯಕ್ಷಗಾನ ಕಲಾವಿದರು!

ಕಟೀಲು ರಥಬೀದಿಯಲ್ಲಿ ಏಕಕಾಲಕ್ಕೆ 6 ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯಿತು.

ಕಟೀಲು ಕ್ಷೇತ್ರದ ಆರು ಮೇಳಗಳು ಯಕ್ಷಗಾನ ಜೈತ್ಯಯಾತ್ರೆ ಮುಗಿಸಿದ ಬೇಸರ.

167 ದಿನಗಳಿಂದ ಕರಾವಳಿ ಭಾಗಗಳಲ್ಲಿ ಯಕ್ಷಗಾನ ಡಿಂಡಿಮ ಮೊಳಗಿಸಿದ ಕಟೀಲು ಯಕ್ಷಗಾನ ಯಾತ್ರೆ.

ಪತ್ತನಾಜೆಯ ಸಂದರ್ಭದಲ್ಲಿ ಕಟೀಲು ಕ್ಷೇತ್ರದ 6 ಮೇಳಗಳು ಕೊನೆಯ ಸೇವೆಯಾಟ ನೀಡಿ ಯಕ್ಷಗಾನದ ಗೆಜ್ಜೆ ಕಳಚಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 6 ಮೇಳಗಳ ಈ ಸಾಲಿನ ತಿರುಗಾಟದ ಕೊನೆಯ ಸೇವೆಯಾಟ.

ಪಂಚಕಲ್ಯಾಣ ಪ್ರಸಂಗದ ವಿಶಾಲಾಕ್ಷಿ-ವನಜಾಕ್ಷಿ-ಮೀನಾಕ್ಷಿ-ಚಿತ್ರಾಕ್ಷಿ-ಕಂಜಾಕ್ಷಿ ಕಥಾ ಭಾಗ ಕೊನೆ ನೀಡಿದೆ.

ದೇವಿಗೆ ಪೂಜೆಯಾದ ಬಳಿಕ ಭಾಗವತರಿಗೆ, ಮೇಳದ ಸಂಚಾಲಕರಿಗೆ ಶ್ರೀದೇವಿಯ ಪ್ರಸಾದ ನೀಡಲಾಗುತ್ತದೆ.

6 ಮೇಳದ ಕಲಾವಿದರಿಗೆ ತಟ್ಟೆಯನ್ನು ನೀಡಿ ದೇವಿಯ ಎದುರಲ್ಲೇ ಗೆಜ್ಜೆ ಬಿಚ್ಚಿ ಸಮಾಪ್ತಿ ಮಾಡಲಾಗಿದೆ.

ಯಕ್ಷಗಾನವನ್ನು ಕರಾವಳಿಯ ಉಸಿರಲ್ಲಿ ಉಸಿರಾಗಿಸಿದ ಕಲಾವಿದರು ಸದ್ಯ ಬಣ್ಣ ಕಳಚಿದ್ದಾರೆ