ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ನಿಂದಿಸಿದ ಕಿಡಿಗೇಡಿಗಳ ವಿರುದ್ಧ ಅಪ್ಪು ಫ್ಯಾನ್ಸ್ ದೂರು

ಕಿಡಿಗೇಡಿಗಳು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ

ದರ್ಶನ್ ಫ್ಯಾನ್ಸ್ ವಿರುದ್ಧ ಅಪ್ಪು ಅಭಿಮಾನಿಗಳು ಠಾಣೆ ಮೆಟ್ಟಿಲೇರಿದ್ದಾರೆ.

ದೊಡ್ಮನೆ ಸೊಸೆ, ಅಶ್ವಿನಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾನೆ ಒಬ್ಬ ಕಿಡಿಗೇಡಿ.

ಕೆಲವರು, ಪುಂಡರು, ಪೋಕರಿಗಳು, ಕೆಲಸ ಇಲ್ಲದವರು ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಕುಟ್ಟುತ್ತಾ ಇರುತ್ತಾರೆ.

ಅಂತಹ ಕಿಡಿಗೇಡಿಗಳಿಗೆ ಪಾಠ ಕಲಿಸಬೇಕು ಅಂತ ಪೊಲೀಸ್ ಕಮಿಷನರ್ ಆಫೀಸ್ ಗೆ ದೂರು ಕೊಟ್ಟಿದ್ದಾರೆ.

ಮೂರ್ನಾಲ್ಕು ದಿನಗಳಿಂದ ಫೇಕ್ ಪೇಜ್ ಗಳಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದಾರೆ.

ಜೊತೆಗೆ ಯುವ ಸಿನಿಮಾದ ಪೈರಸಿ ಲಿಂಕ್ ಗಳನ್ನ ಸಹ ಹಂಚಿಕೊಂಡು ಸಂಭ್ರಮ ಪಡ್ತಾ ಇದ್ದಾರೆ.

ಸದ್ಯ ದೂರು ಸ್ವೀಕರಿಸಿರೋ ಪೊಲೀಸರು ಆದಷ್ಟು ಬೇಗ ಫೇಕ್ ಶೂರರನ್ನ ಪತ್ತೆ ಹಚ್ಚಬೇಕಿದೆ.

ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ, ಫೇಕ್ ಶೂರರ ಹಾವಳಿ ತಲೆ ಎತ್ತದಂತೆ ನೋಡಿಕೊಳ್ಳಬೇಕಿದೆ. 

RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್!