ಮಹಿಳೆಯರು ಇತ್ತೀಚೆಗೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಶಕ್ತಿ, ಸಾಮರ್ಥ್ಯ, ಉತ್ಸಾಹವನ್ನು ತೋರಿಸುತ್ತಿದ್ದಾರೆ.
ಇಲ್ಲೊಬ್ಬ ಯುವತಿ ಆಟೋ ಓಡಿಸಿ ಪ್ರತಿನಿತ್ಯ ಸುಮಾರು ಒಂದು ಸಾವಿರ ರೂಪಾಯಿ ಸಂಪಾದಿಸುತ್ತಿದ್ದಾಳೆ.
ನಂಜನಗೂಡಿನ ಐಶ್ವರ್ಯಾಗೆ ವಾಹನಗಳನ್ನು ಓಡಿಸುವುದೆಂದರೆ ತುಂಬಾ ಇಷ್ಟವಂತೆ.
ಹೀಗಾಗಿ ಪದವಿ ಮುಗಿದ ತಕ್ಷಣ ಈಕೆ ಆಟೋ ಓಡಿಸುವ ಕೆಲಸ ಆಯ್ಕೆ ಮಾಡಿಕೊಂಡಿದ್ದಾಳೆ.
ಪ್ರತಿದಿನ ಸುಮಾರು 1,000 ರೂಪಾಯಿ ಆದಾಯ ಗಳಿಸುತ್ತಿರುವ ಯುವತಿ
ನಂಜನಗೂಡು ನಗರದಲ್ಲಿ ಐಶ್ವರ್ಯಾ ಆಟೋ ಅಂತಲೇ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.
ನಂಜನಗೂಡು ನಗರದಲ್ಲಿ ಆಟೋ ಓಡಿಸುತ್ತಿರುವ ಮೊದಲ ಮಹಿಳೆ ಐಶ್ವರ್ಯಾ ಎನ್ನಬಹುದು.
ಐಶ್ವರ್ಯಾ ತಂದೆಯೂ ಆಟೋ ಚಾಲಕರಾಗಿದ್ದು, ಮಗಳು ಚಿಕ್ಕವಳಿದ್ದಾಗಲೇ ಆಟೋ ಓಡಿಸುವ ತರಬೇತಿ ನೀಡಿದ್ದರು.
ಸುಮಾರು 1 ವರ್ಷದಿಂದ ಆಟೋ ಓಡಿಸುತ್ತಿರುವ ಐಶ್ವರ್ಯಾ ಪ್ರತಿದಿನ ಸುಮಾರು 1,000 ಆದಾಯ ಗಳಿಸುತ್ತಿದ್ದಾರೆ.
ದುಡಿಯುವ ಮನಸ್ಸಿದ್ದವರಿಗೆ ಇಂಥದ್ದೇ ಕೆಲಸ ಬೇಕೆಂದಿಲ್ಲ.