ದೊಡ್ಮನೆ ಮೊಮ್ಮಗಳು ಹುಡುಗಿ ಧನ್ಯಾ ರಾಮ್‌ಕುಮಾರ್ ಸ್ಪೆಷಲ್ ಟ್ಯಾಟೂ ಹಾಕಿಸಿದ್ದಾರೆ. ಆದರೆ ಇದು ಕಶ್ಚನ್ ಮಾರ್ಕ್ ಟ್ಯಾಟೂ!

 ಇಡೀ ಫೋಟೋ ಶೂಟ್‌ನಲ್ಲಿ ಟ್ಯಾಟೂ ಮತ್ತು ಧನ್ಯಾ ರಾಮ್‌ಕುಮಾರ್ ಎರಡೂ ಹೊಳೆಯುತ್ತಿದೆ!

ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ಗಮನಿಸಿದ್ರೆ ಸೂಪರ್ ಅನ್ನುವ ಫೀಲ್ ಬರುತ್ತದೆ

ವಿಶೇಷವಾಗಿಯೇ ತೆಗೆದಿರೊ ಈ ಫೋಟೋಗಳಲ್ಲಿ ಧನ್ಯಾ ರಾಮ್‌ಕುಮಾರ್ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ

ಈಸಿಯಾಗಿ ಮನೆಯಲ್ಲಿಯೇ ಅಲೋವೆರಾ ಜೆಲ್ ಹೀಗೆ ತಯಾರಿಸಿ; ಹೆಚ್ಚು ದಿನ ಫ್ರೆಶ್​ ಆಗಿರುತ್ತೆ!

ಧನ್ಯಾ ರಾಮ್‌ಕುಮಾರ್ ಫೋಟೋಗಳಲ್ಲಿ ಇನ್ನೂ ಒಂದು ಸ್ಪೆಷಲ್ ವಿಷಯ ಕೂಡ ಇದೆ. ಅದನ್ನ ಎಡ ಭುಜದ ಮೇಲೆ ನೋಡಬಹುದು

ಹೌದು, ಫೋಟೋವನ್ನ ಸೂಕ್ಷ್ಮವಾಗಿಯೇ ಗಮನಿಸಿದ್ರೆ ಸಾಕು, ಆ ವಿಶೇಷ ನಿಮ್ಮನ್ನ ಸೆಳೆದು ಬಿಡುತ್ತದೆ. ಹಾಗೆ ಕಾಣಿಸೋ ಆ ವಿಶೇಷ ಬೇರೆ ಏನೋ ಅಲ್ಲ. ಒಂದು ಸ್ಪೆಷಲ್ ಹಜ್ಜೆ ಆಗಿದೆ ನೋಡಿ

ಧನ್ಯಾ ರಾಮ್‌ಕುಮಾರ್ ಅದ್ಯಾಕೋ ಕ್ವಶ್ಚನ್ ಮಾರ್ಕ್ ಟ್ಯಾಟೂ ಹಾಕಿಸಿದ್ದಾರೋ ಏನೋ. ಆದರೆ, ಧನ್ಯಾ ರಾಮ್‌ ಈ ಒಂದು ಪುಟ್ಟ ಟ್ಯಾಟೂ ಮೂಲಕ ಇನ್ನಷ್ಟು ಇಂಟ್ರಸ್ಟಿಂಗ್ ಅನಿಸುತ್ತಿದ್ದಾರೆ

ಕ್ವಶ್ಚನ್ ಮಾರ್ಕ್‌ ಅನ್ನೋದು ತುಂಬಾನೆ ವಿಶೇಷವೂ ಆಗಿದೆ. ಆದರೆ ಧನ್ಯಾ ರಾಮ್‌ಕುಮಾರ್ ಯಾಕೆ ಹಾಕಿಸಿದ್ದಾರೆ ಅನ್ನುವ ಕುತೂಹಲ ಹಾಗೆ ಇದೆ

ಸೋಯಾಬೀನ್ ಸಸ್ಯಾಹಾರನಾ? ಮಾಂಸಹಾರನಾ? ಇಲ್ಲಿದೆ ತಿಳಿದುಕೊಳ್ಳಿ ಸತ್ಯಾಂಶ!

ಧನ್ಯಾ ರಾಮ್‌ಕುಮಾರ್ ಸಿನಿಮಾಗಳಲ್ಲೂ ಬ್ಯುಸಿ ಇದ್ದಾರೆ. ಮೊನ್ನೆ ಮೊನ್ನೆವರೆಗೂ ಜಡ್ಜಮೆಂಟ್ ಸಿನಿಮಾದ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ

 ಅದಕ್ಕೂ ಮೊದಲು ಕಾಲಾಪತ್ತರ್ ಚಿತ್ರದ ಕೆಲಸ ಪೂರ್ಣಗೊಳಿಸಿದ್ದರು. ಇದೀಗ ಈ ಎರಡು ಚಿತ್ರದ ರಿಲೀಸ್ ಎದುರು ನೋಡುತ್ತಿದ್ದಾರೆ ಅಂತಲೂ ಹೇಳಬಹುದು

ಧನ್ಯಾ ರಾಮ್‌ಕುಮಾರ್ ಇತ್ತೀಚಿಗೆ ತಮ್ಮೂರು ಗಾಜನೂರಿಗೂ ಹೋಗಿ ಬಂದಿದ್ದಾರೆ. ಅಜ್ಜನ ಮನೆ ಅಜ್ಜಿಯ ಮನೆಯ ಹೀಗೆ ಎಲ್ಲವನ್ನೂ ಅಮ್ಮನೊಟ್ಟಿಗೆ ಸುತ್ತಿಕೊಂಡು ವಾಪಾಸ್ ಆಗಿದ್ದಾರೆ

ಊರಿನ ದೊಡ್ಡ ಆಲದಮರದ ಬಳಿ ಕುಳಿತು ಖುಷಿಪಟ್ಟಿದ್ದಾರೆ

ಧನ್ಯಾ ರಾಮ್‌ಕುಮಾರ್ ಹೊಸ ರೀತಿಯ ಫೋಟೋ ಶೂಟ್‌ಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಮಾಡ್ರಾನ್ ಡ್ರೆಸ್‌ನಲ್ಲೂ ಹೊಳೆಯುತ್ತಾರೆ. ಆದರೆ ಈ ಲೇಟೆಸ್ಟ್ ಫೋಟೋ ಶೂಟ್‌ಗಳಲ್ಲೂ ಇನ್ನೂ ಸುಂದರವಾಗಿಯೇ ಕಾಣಿಸುತ್ತಿದ್ದಾರೆ ಅಂತಲೂ ಬಣ್ಣಿಸಬಹುದು